alex Certify ವಿವಾದಕ್ಕೆ ಕಾರಣವಾಯ್ತು ʼನೈಕಿʼ ಶೂ: ಕಾನೂನು ಹೋರಾಟಕ್ಕೆ ಮುಂದಾದ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾದಕ್ಕೆ ಕಾರಣವಾಯ್ತು ʼನೈಕಿʼ ಶೂ: ಕಾನೂನು ಹೋರಾಟಕ್ಕೆ ಮುಂದಾದ ಕಂಪನಿ

 

ಅಮೆರಿಕದ ಖ್ಯಾತ ಗಾಯಕ 21 ವರ್ಷದ ಲಿಲ್​ ನಾಸ್​ ಎಕ್ಸ್​ ಕೆಲ ದಿನಗಳ ಹಿಂದಷ್ಟೇ ಹೊಸ ಮ್ಯೂಸಿಕ್​ ವಿಡಿಯೋ ರಿಲೀಸ್​ ಮಾಡಿ ಸುದ್ದಿಯಾಗಿದ್ದರು. ಇದೀಗ ಓಲ್ಡ್​ ಟೌನ್​ ರೋಡ್​ ಖ್ಯಾತಿಯ ಗ್ರ್ಯಾಮಿ ಪ್ರಶಸ್ತಿ ವಿಜೇತ ಕಲಾವಿದ, ಸ್ಯಾಟನ್​ ಶೂ ವಿಚಾರದಲ್ಲಿ ಹೊಸ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ.

ಬ್ರೂಕ್ಲಿನ್ ಮೂಲದ​​ ಕಂಪನಿಯ ಸಹಭಾಗಿತ್ವದಲ್ಲಿ 666 ಸ್ಯಾಟನ್​ ಶೂಗಳನ್ನ ತಯಾರಿಸಲು ಸಹಕರಿಸಲಿದ್ದೇನೆ ಎಂದು ರ್ಯಾಪರ್​ ಘೋಷಣೆ ಮಾಡಿದ್ದರು. ಕಪ್ಪುಬಣ್ಣದ ನೈಕಿ ಏರ್ ಮ್ಯಾಕ್ಸ್ ಶೂ ಇದೀಗ ವಿವಾದಕ್ಕೆ ಕಾರಣವಾಗಿದೆ. ಇದರಲ್ಲಿ ಕೆಂಪು ಬಣ್ಣಕ್ಕಾಗಿ ಮಾನವನ ರಕ್ತದ ಒಂದು ಹನಿ ಬೆರಸಲಾಗಿದೆ ಎಂದು ಹೇಳಲಾಗಿದ್ದು ಮಾತ್ರವಲ್ಲದೇ ಬೈಬಲ್​ನ ಕೆಲ ಪವಿತ್ರ ಶಬ್ದಗಳು ಮತ್ತು ​ಪೆಂಟಗ್ರಾಮ್ ಚಿಹ್ನೆಯನ್ನ ಇಡಲಾಗಿದೆ. ಇದು ಬೈಬಲ್​ ನಿಯಮಕ್ಕೆ ವಿರುದ್ಧವಾಗಿದೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಇನ್ನು ಸೋಶಿಯಲ್​ ಮೀಡಿಯಾದಲ್ಲಿ ಬಾಯ್ಕಾಟ್​ ನೈಕಿ ಅಭಿಯಾನ ಶುರುವಾಗ್ತಿದ್ದಂತೆಯೇ ಈ ವಿಚಾರವಾಗಿ ನೈಕಿ ಸ್ಪಷ್ಟನೆ ನೀಡಿದ್ದು, ಈ ಯೋಜನೆಯೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಹೇಳಿದೆ. ಈ ಶೂಗಳು ಸೋಮವಾರ ವ್ಯಾಪಕವಾಗಿ ಮಾರಾಟವಾಗಿದೆ. ಒಂದು ಜೋಡಿ ಶೂಗೆ 1018 ಡಾಲರ್​ ರೂಪಾಯಿ ಮೌಲ್ಯವಿದೆ. ಇದೀಗ ನೈಕಿ ಕಂಪನಿ ಇದರ ವಿರುದ್ದ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಪ್ರಕರಣ ಯಾವ ತಿರುವು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...