alex Certify ಕೋಳದಲ್ಲಿ ಬಂಧಿಯಾಗಿ ಪರದಾಡಿದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಳದಲ್ಲಿ ಬಂಧಿಯಾಗಿ ಪರದಾಡಿದ ಪೊಲೀಸ್

ಸೋಜಿಗದ ಘಟನೆಯೊಂದರಲ್ಲಿ, ಬ್ರಿಟನ್‌ನ ಪೊಲೀಸ್ ಅಧಿಕಾರಿಯೊಬ್ಬರು ಕೈಕೋಳದಲ್ಲಿ ತಮ್ಮದೇ ಕೈಗಳನ್ನು ಸಿಲುಕಿಸಿಕೊಂಡಿದ್ದು, ಅವರ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿ ಧಾವಿಸುವಂತಾಗಿದೆ.

ಪೊಲೀಸ್ ತರಬೇತುದಾರರಾದ ಸ್ಕಾಟ್‌ ರೆನ್ವಿಕ್ ಹೆಸರಿನ ಈ ಅಧಿಕಾರಿ ಖುದ್ದು ತಮ್ಮ ಕೈಗಳಿಗೇ ಕೋಳ ಹಾಕಿಕೊಂಡಿದ್ದಾರೆ. ಕೈಗಳನ್ನು ಬಿಡಿಸಿಕೊಳ್ಳಲಾಗದ ರೆನ್ವಿಕ್‌ ಕೂಡಲೇ ಫೈರ್‌ ಸ್ಟೇಷನ್‌ನತ್ತ ನೆರವು ಕೋರಿಕೊಂಡು ಹೋಗಿದ್ದಾರೆ.

ನಾಥ್‌ಹ್ಯಾಂಪ್ಟನ್‌ಶೈರ್‌ನ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಪೆಡಲ್‌ ಕಟ್ಟರ್‌ಗಳನ್ನು ಬಳಸಿ ಕೊನೆಗೂ ಅವರ ಕೈಗಳನ್ನು ಬಿಡುಗಡೆ ಮಾಡಲು ಸಫಲರಾಗಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿಗೆ ಧನ್ಯವಾದ ತಿಳಿಸಿದ ರೆನ್ವಿಕ್‌, ತಮ್ಮ ಈ ಕಥೆಯನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...