ಹೆಸರಲ್ಲೇನಿದೆ..? ಎಂಬ ಪ್ರಶ್ನೆಯನ್ನ ಬಹಳ ವರ್ಷಗಳ ಹಿಂದೆಯೇ ಷೇಕ್ಸ್ಪಿಯರ್ ಕೇಳಿದ್ದರು.
ಈ ಮಾತನ್ನ ಈಗ ನೆನಪು ಮಾಡೋಕೆ ಕಾರಣವಿದೆ. ಫಿಲಿಫೈನ್ಸ್ನ ಕುಟುಂಬವೊಂದು ತಮ್ಮ ಮನೆಯಲ್ಲಿ ಜನಿಸಿದ ಗಂಡು ಮಗುವಿಗೆ ಒಂದು ವಿಚಿತ್ರ ಹೆಸರನ್ನ ನಾಮಕರಣ ಮಾಡಿದೆ. ಈ ಹೆಸರು ಹೇಗಿದೆ ಅಂದರೆ ಇದನ್ನ ಉಚ್ಚರಣೆ ಮಾಡೋಕೂ ನೀವು ತುಂಬಾನೇ ಕಷ್ಟ ಪಡಬೇಕು.
ಅಂದ ಹಾಗೆ ಈ ಮಗುವಿನ ಹೆಸರು Ghlynnyl Hylhyr Yzzyghyl Mampuan Buscato ಎಂದಾಗಿದೆ.
ಈ ವಿಚಿತ್ರ ಹೆಸರನ್ನ ಕರೆಯೋದು ತುಂಬಾನೇ ಕಷ್ಟ. ಮಗುವಿನ ಅಜ್ಜ ರೌಗಿಲ್ ಫೆರೋಲಿನ್ ಎಸ್ಟ್ರೆರಾ ಎಂಬವರು ಈ ಕ್ಲಿಷ್ಟಕರ ಹೆಸರನ್ನ ಆಯ್ಕೆ ಮಾಡಿದವರಂತೆ.
Ghlynnyl Hylhyr Yzzyghyl ಈ ಹೆಸರನ್ನ ಹೇಗೆ ಉಚ್ಚಾರ ಮಾಡಬೇಕು ಅಂತಾನೇ ಅರ್ಥವಾಗೋದಿಲ್ಲ. ಜನ್ಮದಾಖಲೆ ಮಾಡುವ ಕಚೇರಿಯಲ್ಲೂ ಮಗುವಿನ ಹೆಸರನ್ನ ತಪ್ಪಾಗಿ ಬರೆಯಲಾಗಿದ್ದು ಅದನ್ನ ಸರಿಪಡಿಸಲು ಮನವಿ ಮಾಡಿದ್ದೇವೆ ಎಂದು ಮಗುವಿನ ತಾತ ಹೇಳಿದ್ದಾರೆ.
ಸಿಟಿ ಸ್ಕ್ಯಾನ್ ಹಗಲು ದರೋಡೆಗೆ ಮೂಗುದಾರ ಹಾಕಿದ ರಾಜ್ಯ ಸರ್ಕಾರ..!
ನೀವು ಹೇಗೋ ಕಷ್ಟಪಟ್ಟು ಈ ಹೆಸರನ್ನ ಉಚ್ಚರಿಸಿದ್ದರೂ ಸಹ ಅದನ್ನ ನೆನಪಿನಲ್ಲಿ ಇಟ್ಟುಕೊಳ್ಳೋದು ತುಂಬಾನೇ ಕಷ್ಟ. ಇದಕ್ಕಾಗಿ ಮಗುವಿನ ತಾತ ಇನ್ನೊಂದು ಪ್ಲಾನ್ ಮಾಡಿದ್ದಾರೆ. ಅದೇನೆಂದರೆ ಈ ಮಗುವಿಗೆ ಶಾರ್ಟ್ ಆಗಿ ಕಾನ್ಸೋನೆಂಟ್ (ವ್ಯಂಜನ) ಎಂದು ಕರೆಯಬಹುದು. ಮಗುವಿನ ನಿಜವಾದ ಹೆಸರಲ್ಲಿ ಯಾವುದೇ ಸ್ವರಾಕ್ಷರ ಇಲ್ಲದ ಕಾರಣ ಮಗುವಿಗೆ ವ್ಯಂಜನ ಎಂದು ಕರೆಯಲು ತಾತ ನಿರ್ಧರಿಸಿದ್ದಾರೆ.
ಮಗುವಿನ ತಂದೆ , ತಾಯಿ, ಅಜ್ಜ ಹಾಗೂ ಅಜ್ಜಿ ಹೆಸರಿನಿಂದ ಕೆಲ ಅಕ್ಷರಗಳನ್ನ ಆರಿಸಿಕೊಂಡು ಈ ವಿಚಿತ್ರ ಹೆಸರನ್ನ ಮಗುವಿಗೆ ನಾಮಕರಣ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೇ ಇನ್ನೂ ಕೆಲ ಅಕ್ಷರಗಳನ್ನ ಇತರೆ ಕುಟುಂಬಸ್ಥರ ಹೆಸರಿನಿಂದಲೂ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ..!