alex Certify ಈ ಮಗುವಿನ ಹೆಸರನ್ನ ಉಚ್ಚಾರ ಮಾಡೋದೇ ಒಂದು ದೊಡ್ಡ ಸವಾಲು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮಗುವಿನ ಹೆಸರನ್ನ ಉಚ್ಚಾರ ಮಾಡೋದೇ ಒಂದು ದೊಡ್ಡ ಸವಾಲು..!

ಹೆಸರಲ್ಲೇನಿದೆ..? ಎಂಬ ಪ್ರಶ್ನೆಯನ್ನ ಬಹಳ ವರ್ಷಗಳ ಹಿಂದೆಯೇ ಷೇಕ್ಸ್​ಪಿಯರ್​ ಕೇಳಿದ್ದರು.

ಈ ಮಾತನ್ನ ಈಗ ನೆನಪು ಮಾಡೋಕೆ ಕಾರಣವಿದೆ. ಫಿಲಿಫೈನ್ಸ್​​ನ ಕುಟುಂಬವೊಂದು ತಮ್ಮ ಮನೆಯಲ್ಲಿ ಜನಿಸಿದ ಗಂಡು ಮಗುವಿಗೆ ಒಂದು ವಿಚಿತ್ರ ಹೆಸರನ್ನ ನಾಮಕರಣ ಮಾಡಿದೆ. ಈ ಹೆಸರು ಹೇಗಿದೆ ಅಂದರೆ ಇದನ್ನ ಉಚ್ಚರಣೆ ಮಾಡೋಕೂ ನೀವು ತುಂಬಾನೇ ಕಷ್ಟ ಪಡಬೇಕು.
ಅಂದ ಹಾಗೆ ಈ ಮಗುವಿನ ಹೆಸರು Ghlynnyl Hylhyr Yzzyghyl Mampuan Buscato ಎಂದಾಗಿದೆ.

ಈ ವಿಚಿತ್ರ ಹೆಸರನ್ನ ಕರೆಯೋದು ತುಂಬಾನೇ ಕಷ್ಟ. ಮಗುವಿನ ಅಜ್ಜ ರೌಗಿಲ್ ಫೆರೋಲಿನ್ ಎಸ್ಟ್ರೆರಾ ಎಂಬವರು ಈ ಕ್ಲಿಷ್ಟಕರ ಹೆಸರನ್ನ ಆಯ್ಕೆ ಮಾಡಿದವರಂತೆ.

Ghlynnyl Hylhyr Yzzyghyl ಈ ಹೆಸರನ್ನ ಹೇಗೆ ಉಚ್ಚಾರ ಮಾಡಬೇಕು ಅಂತಾನೇ ಅರ್ಥವಾಗೋದಿಲ್ಲ. ಜನ್ಮದಾಖಲೆ ಮಾಡುವ ಕಚೇರಿಯಲ್ಲೂ ಮಗುವಿನ ಹೆಸರನ್ನ ತಪ್ಪಾಗಿ ಬರೆಯಲಾಗಿದ್ದು ಅದನ್ನ ಸರಿಪಡಿಸಲು ಮನವಿ ಮಾಡಿದ್ದೇವೆ ಎಂದು ಮಗುವಿನ ತಾತ ಹೇಳಿದ್ದಾರೆ.

ಸಿಟಿ ಸ್ಕ್ಯಾನ್​ ಹಗಲು ದರೋಡೆಗೆ ಮೂಗುದಾರ ಹಾಕಿದ ರಾಜ್ಯ ಸರ್ಕಾರ..!

ನೀವು ಹೇಗೋ ಕಷ್ಟಪಟ್ಟು ಈ ಹೆಸರನ್ನ ಉಚ್ಚರಿಸಿದ್ದರೂ ಸಹ ಅದನ್ನ ನೆನಪಿನಲ್ಲಿ ಇಟ್ಟುಕೊಳ್ಳೋದು ತುಂಬಾನೇ ಕಷ್ಟ. ಇದಕ್ಕಾಗಿ ಮಗುವಿನ ತಾತ ಇನ್ನೊಂದು ಪ್ಲಾನ್​ ಮಾಡಿದ್ದಾರೆ. ಅದೇನೆಂದರೆ ಈ ಮಗುವಿಗೆ ಶಾರ್ಟ್ ಆಗಿ ಕಾನ್ಸೋನೆಂಟ್​ (ವ್ಯಂಜನ) ಎಂದು ಕರೆಯಬಹುದು. ಮಗುವಿನ ನಿಜವಾದ ಹೆಸರಲ್ಲಿ ಯಾವುದೇ ಸ್ವರಾಕ್ಷರ ಇಲ್ಲದ ಕಾರಣ ಮಗುವಿಗೆ ವ್ಯಂಜನ ಎಂದು ಕರೆಯಲು ತಾತ ನಿರ್ಧರಿಸಿದ್ದಾರೆ.

ಮಗುವಿನ ತಂದೆ , ತಾಯಿ, ಅಜ್ಜ ಹಾಗೂ ಅಜ್ಜಿ ಹೆಸರಿನಿಂದ ಕೆಲ ಅಕ್ಷರಗಳನ್ನ ಆರಿಸಿಕೊಂಡು ಈ ವಿಚಿತ್ರ ಹೆಸರನ್ನ ಮಗುವಿಗೆ ನಾಮಕರಣ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೇ ಇನ್ನೂ ಕೆಲ ಅಕ್ಷರಗಳನ್ನ ಇತರೆ ಕುಟುಂಬಸ್ಥರ ಹೆಸರಿನಿಂದಲೂ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ..!

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...