alex Certify ವಾರದಲ್ಲಿ ಇನ್ಮುಂದೆ ನಾಲ್ಕು ದಿನ ಮಾತ್ರ ಕೆಲಸ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರದಲ್ಲಿ ಇನ್ಮುಂದೆ ನಾಲ್ಕು ದಿನ ಮಾತ್ರ ಕೆಲಸ…?

ಚೀನಾದಲ್ಲಿ ಮೊದಲಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಈಗ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಇದರ ನಿಯಂತ್ರಣಕ್ಕೆ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಜಾರಿಗೊಳಿಸಿದ್ದು, ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ.

ಲಾಕ್ ಡೌನ್ ಜಾರಿ ಮಾಡಿದ್ದ ಕಾರಣ ಎಲ್ಲ ರಾಷ್ಟ್ರಗಳು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿವೆ. ಇದಕ್ಕೆ ನ್ಯೂಜಿಲ್ಯಾಂಡ್ ಕೂಡ ಹೊರತಾಗಿಲ್ಲ. ಪ್ರವಾಸೋದ್ಯಮವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ನ್ಯೂಜಿಲ್ಯಾಂಡ್ ಸದ್ಯಕ್ಕೆ ಪ್ರವಾಸಿಗರು ದೇಶಕ್ಕೆ ಬರುವುದಿಲ್ಲ ಎಂಬುದನ್ನು ಮನಗಂಡಿದೆ.

ಹೀಗಾಗಿಯೇ ಆರ್ಥಿಕವಾಗಿ ಚೇತರಿಸಿಕೊಳ್ಳಲು ಹಾಗೂ ಕೊರೊನಾ ಕಂಗೆಟ್ಟಿರುವ ತನ್ನ ದೇಶದ ಜನತೆಗೆ ಲವಲವಿಕೆ ತುಂಬಲು ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದಾ ಹೊಸ ಐಡಿಯಾ ಒಂದನ್ನು ತೇಲಿಬಿಟ್ಟಿದ್ದಾರೆ.

ದೇಶದಲ್ಲಿ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸದ ನಿಯಮ ಜಾರಿಗೆ ತಂದರೆ ರಜಾ ದಿನಗಳಲ್ಲಿ ಜನತೆ ಪ್ರವಾಸಿ ಸ್ಥಳಗಳಿಗೆ ತೆರಳುತ್ತಾರೆ. ಇದರಿಂದ ಅವರುಗಳಿಗೆ ಉತ್ಸಾಹ ಬರುವುದರ ಜೊತೆಗೆ ದೇಶದ ಪ್ರವಾಸೋದ್ಯಮವೂ ಚೇತರಿಸಿಕೊಳ್ಳುತ್ತದೆ ಎಂದು ಜಸಿಂದಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...