alex Certify ಒಂದೇ ಒಂದು ಫೋಟೋದಿಂದ ಭಾರೀ ಮುಖಭಂಗ ಅನುಭವಿಸಿದ ಡೊನಾಲ್ಡ್ ಟ್ರಂಪ್.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಒಂದು ಫೋಟೋದಿಂದ ಭಾರೀ ಮುಖಭಂಗ ಅನುಭವಿಸಿದ ಡೊನಾಲ್ಡ್ ಟ್ರಂಪ್.​..!

ಕೋಕಾಕೋಲಾ ಬ್ರ್ಯಾಂಡ್​ನ್ನು ಬಾಯ್ಕಾಟ್​ ಮಾಡಬೇಕು ಅಂತಾ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆ ನೀಡಿದ ಕೇವಲ ನಾಲ್ಕು ದಿನಗಳಲ್ಲೇ ಸ್ವತಃ ಟ್ರಂಪ್​ ಟೇಬಲ್​ನಲ್ಲೇ ಕೋಕಾಕೋಲಾ ಬಾಟಲಿ ಇರೋದನ್ನ ನೆಟ್ಟಿಗರು ಕಂಡು ಹಿಡಿದಿದ್ದಾರೆ. ಈ ಮೂಲಕ ಡೊನಾಲ್ಡ್​ ಟ್ರಂಪ್​ ಹೊಸ ಮುಖಭಂಗವನ್ನ ಅನುಭವಿಸುವಂತಾಗಿದೆ. ಜಾರ್ಜಿಯಾ ವೋಟಿಂಗ್​ ರೈಟ್ಸ್ ವೇಳೆ ಟ್ರಂಪ್​ ಇಂತಹದ್ದೊಂದು ಹೇಳಿಕೆ ನೀಡಿದ್ದರು.

ಶ್ವೇತ ಭವನದಲ್ಲಿ ಟ್ರಂಪ್​​ಗೆ ಮಾಜಿ ಸಲಹೆಗಾರರಾಗಿದ್ದ ಸ್ಟೀಫನ್​ ಮಿಲ್ಲರ್​​​ ಫೋಟೋವೊಂದನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು ಇದರಲ್ಲಿ ಟ್ರಂಪ್​ ಕುಳಿತಿರುವ ಟೇಬಲ್​​ನಲ್ಲಿ ಕೋಲಾ ಬಾಟಲಿ ಇರೋದನ್ನ ನೀವು ಕಾಣಬಹುದಾಗಿದೆ. ಟ್ರಂಪ್​ ಜೊತೆ ಈಗಷ್ಟೇ ಒಂದು ಭಯಾನಕ ಸಭೆ ನಡೀತು ಅಂತಾ ಮಿಲ್ಲರ್​ ಈ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.

ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಟ್ಟಿದೆ. ಮಿಲ್ಲರ್​ ಶೇರ್​ ಮಾಡಿರುವ ಫೋಟೋದಲ್ಲಿ ಟ್ರಂಪ್​ ಟೇಬಲ್​ನಲ್ಲಿ ಕೋಲಾ ಬಾಟಲಿ ಇರೋದನ್ನ ನೆಟ್ಟಿಗರು ಕಂಡುಹಿಡಿದಿದ್ದಾರೆ. ಈ ಟ್ವೀಟ್​ ಸಾಕಷ್ಟು ಲೈಕ್ಸ್, ಕಮೆಂಟ್ ಹಾಗೂ ರಿಟ್ವೀಟ್​​​ ಸಂಪಾದಿಸಿದೆ. ಬಹುಶಃ ಕೋಕಾಕೋಲಾ ಇನ್ನೂ ಸಂಪೂರ್ಣವಾಗಿ ಬಾಯ್ಕಾಟ್​ ಆಗಿಲ್ಲ ಎನಿಸುತ್ತೆ ಅಂತಾ ನೆಟ್ಟಿಗರು ಟ್ರಂಪ್​ರನ್ನ ಅಪಹಾಸ್ಯ ಮಾಡಿಕೊಳ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...