alex Certify ಅಪ್ಪ- ಮಗ ಟೊಮ್ಯಾಟೊ ಹೆಚ್ಚುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪ- ಮಗ ಟೊಮ್ಯಾಟೊ ಹೆಚ್ಚುವ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ
ದಿನಕ್ಕೊಂದು ಅಚ್ಚರಿಯಾಗುವ ರೀತಿಯ ವಿಡಿಯೋ ಕಾಣಿಸಿಕೊಳ್ಳುತ್ತವೆ. ಈಗಲೂ ಅಪ್ಪ-ಮಗ ಟೊಮ್ಯಾಟೊ ಕತ್ತರಿಸುವ ವಿಡಿಯೋವೊಂದು ವೈರಲ್ ಆಗಿದೆ.

ಹೌದು, ರೆಸ್ಟೋರೆಂಟ್‌ನ ಅಡುಗೆ ಮನೆಯಲ್ಲಿ ಅಪ್ಪ-ಮಗ ಟೊಮ್ಯಾಟೊ ಹೆಚ್ಚುವ ವಿಡಿಯೊ ಇದೀಗ ವೈರಲ್ ಆಗಿದ್ದು, ಇಬ್ಬರು ಟೊಮ್ಯಾಟೊ ಹೆಚ್ಚುವ ವೇಗವನ್ನು ನೋಡಿ ನೆಟ್ಟಿಗರು ಅಚ್ಚರಿಯಾಗಿದ್ದಾರೆ.

ರೆಸ್ಟೋರೆಂಟ್ ಒಂದರಲ್ಲಿ ಮೊದಲಿಗೆ ಅಪ್ಪ ಟೊಮ್ಯಾಟೊವನ್ನು ಯಂತ್ರದ ರೀತಿಯಲ್ಲಿ ಹೆಚ್ಚಿದ್ದಾರೆ. ಬಳಿಕ ಈ ವೇಗಕ್ಕೆ ಸರಿಸಾಟಿಯ ರೀತಿಯಲ್ಲಿ ಆತನ‌ ಮಗನು ಹೆಚ್ಚಿದ್ದಾನೆ.

ಕಳೆದ ಡಿಸೆಂಬರ್‌ನಲ್ಲಿಯೇ ಈ ವಿಡಿಯೋವನ್ನು ಹಾಕಲಾಗಿದೆ. ಆದರೀಗ ಟ್ವೀಟರ್‌ನಲ್ಲಿ ಹಾಕಿದ ಬಳಿಕ ಭಾರಿ ವೈರಲ್ ಆಗಿದೆ. 15 ಸೆಕೆಂಡ್‌ನ ವಿಡಿಯೋದಲ್ಲಿ ತಂದೆಯ ರೀತಿಯಲ್ಲಿಯೇ ಮಗನೂ ಟೊಮ್ಯಾಟೊವನ್ನು ವೇಗವಾಗಿ ಕತ್ತರಿಸಿದ ಬಳಿಕ‌ ತಂದೆಯ ಮೊಗದಲ್ಲಿ ಆನಂದ ಮೂಡುವುದನ್ನು ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...