alex Certify OMG: ಮನೆ ಶಿಫ್ಟ್ ಮಾಡುವವರು ಧರಿಸುವಂತಿಲ್ಲ ಬಟ್ಟೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಮನೆ ಶಿಫ್ಟ್ ಮಾಡುವವರು ಧರಿಸುವಂತಿಲ್ಲ ಬಟ್ಟೆ…!

ಮನೆಗಳನ್ನು ಸ್ಥಳಾಂತರ ಮಾಡುವುದು ಯಾವಾಗಲೂ ತ್ರಾಸದಾಯಕ ಕೆಲಸವಾಗಿದ್ದು, ಸಾಕಷ್ಟು ಪ್ಲಾನಿಂಗ್ ಹಾಗೂ ಆಪ್ತರ ನೆರವನ್ನು ಕೋರುತ್ತದೆ. ಆದರೆ ಈ ಕೆಲಸಕ್ಕೆಂದೇ ಪ್ಯಾಕರ್‌ಗಳು ಹಾಗೂ ಮೂವರ್‌ಗಳ ಸೇವೆಗಳು ಬಹಳಷ್ಟು ಲಭ್ಯವಿದೆ.

ಈ ಶಿಫ್ಟಿಂಗ್ ಏಜೆನ್ಸಿಗಳು ಎಲ್ಲಾ ರೀತಿಯ ಬೇಡಿಕೆಗಳು ಹಾಗೂ ಕೋರಿಕೆಗಳನ್ನು ತಮ್ಮ ಗ್ರಾಹಕರಿಂದ ಪಡೆದುಕೊಂಡು ಅದಕ್ಕೆ ತಕ್ಕಂತೆ ತಮ್ಮ ಕೆಲಸದ ಯೋಜನೆಗಳನ್ನು ಸಿದ್ಧಪಡಿಸುತ್ತಾರೆ. ಆದರೆ ಇಲ್ಲೊಂದು ’ನಿರ್ವಾಣ’ ಜೋಡಿಯೊಂದು ತಮ್ಮ ಮನೆಯನ್ನು ಶಿಫ್ಟ್‌ ಮಾಡಲು ’ಸಹಜವಾದ’ ಐಡಿಯಾವೊಂದನ್ನು ಕೋರಿದ್ದಾರೆ.

ತಮ್ಮ ಮನೆಯಲ್ಲಿರುವ ಸಾಮಾನು ಸರಂಜಾಮುಗಳನ್ನು ಶಿಫ್ಟ್ ಮಾಡಲು ಬರುವ ಚಾಲಕನ ಮೈಮೇಲೆ ಯಾವುದೇ ಬಟ್ಟೆಗಳು ಇರಬಾರದು ಎಂದು ಈ ಜೋಡಿ ಬೇಡಿಕೆಯನ್ನು ಮುಂದಿಟ್ಟಿದೆ. ಸೆಪ್ಟೆಂಬರ್‌ ಮಧ್ಯ ಭಾಗದಲ್ಲಿ ತಮ್ಮ ಮನೆಯನ್ನು ಶಿಫ್ಟ್ ಮಾಡಲು ಈ ಜೋಡಿ ನಿರ್ಧರಿಸಿದ್ದು, ಇದಕ್ಕೆಂದು £2,000ಗಳನ್ನು ಪಾವತಿ ಮಾಡಲೂ ಸಹ ಈ ಜೋಡಿ ಸಿದ್ಧವಿದೆ. ಆದರೆ ಒಂದೇ ಒಂದು ಕಂಡೀಷನ್ ಅಂದ್ರೆ, ಶಿಫ್ಟ್ ಮಾಡಲು ಬರುವವರು ಮೈಮೇಲೆ ಬಟ್ಟಿ ಧರಿಸುವಂತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...