ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತೊಮ್ಮೆ ಮನುಷ್ಯರನ್ನು ಚಂದ್ರನತ್ತ ಕಳುಹಿಸಲು ತಯಾರಿ ನಡೆಸುತ್ತಿದೆ. 1972 ರಲ್ಲಿ ನಾಸಾ ಮೊದಲ ಬಾರಿಗೆ ಮನುಷ್ಯರನ್ನು ಚಂದ್ರನ ಬಳಿಗೆ ಕಳುಹಿಸಿತ್ತು. ನಾಸಾ ಮುಖ್ಯಸ್ಥ ಜಿಮ್ ಬ್ರಿಡೆನ್‌ಸ್ಟೈನ್ ಈ ವಿಷ್ಯವನ್ನು ತಿಳಿಸಿದ್ದಾರೆ.
ನಾಸಾ 2024 ರಲ್ಲಿ ಮೊದಲ ಮಹಿಳಾ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸಲು ಯೋಜಿಸುತ್ತಿದೆ. ಪುರುಷ ಗಗನಯಾತ್ರಿ ಕೂಡ ಈ ಕಾರ್ಯಾಚರಣೆಯಲ್ಲಿರಲಿದ್ದಾರೆಂದು ಅವರು ಹೇಳಿದ್ದಾರೆ. ನಾಸಾ ಪ್ರಕಾರ, ವೈಜ್ಞಾನಿಕ ಆವಿಷ್ಕಾರ, ಆರ್ಥಿಕ ಲಾಭಗಳಿಗಾಗಿ ಮತ್ತು ಹೊಸ ತಲೆಮಾರಿನ ಪರಿಶೋಧಕರಿಗೆ ಸ್ಫೂರ್ತಿ ನೀಡಲು ಈ ಕಾರ್ಯಾಚರಣೆಯನ್ನು ಚಂದ್ರನ ಮೇಲೆ ಪ್ರಾರಂಭಿಸಲಾಗುತ್ತಿದೆ.
ದೇಶದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಯುಎಸ್ ಸಂಸತ್ತು ಡಿಸೆಂಬರ್ ವೇಳೆಗೆ ಆರಂಭಿಕ ಬಜೆಟ್ ಆಗಿ 23 ಸಾವಿರ 545 ಕೋಟಿ ರೂಪಾಯಿಗಳನ್ನು ಅನುಮೋದಿಸಿದರೆ, ಚಂದ್ರನ ಮೇಲೆ ನಮ್ಮ ಅಭಿಯಾನವನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ನಾಸಾ ಹೇಳಿದೆ.
ಈ ಮಿಷನ್ 4 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕೆ ಸುಮಾರು 28 ಬಿಲಿಯನ್ ಡಾಲರ್ ವೆಚ್ಚವಾಗಲಿದೆ. ಈ ಮೊದಲು ಮಾಡಿದ ವೈಜ್ಞಾನಿಕ ಸಂಶೋಧನೆಗಿಂತ ವಿಭಿನ್ನ ಸಂಶೋಧನೆಗಳನ್ನು ಇದರಲ್ಲಿ ಮಾಡಲಾಗುತ್ತದೆ ಎಂದು ನಾಸಾ ಹೇಳಿದೆ.