alex Certify ಒಂದೇ ಫ್ರೇಮ್‌ ನಲ್ಲಿ ಸೆರೆಯಾಯ್ತು ಹಗಲು – ರಾತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಫ್ರೇಮ್‌ ನಲ್ಲಿ ಸೆರೆಯಾಯ್ತು ಹಗಲು – ರಾತ್ರಿ

NASA Astronaut Shares Photo Capturing Boundary Between Day and ...

ನಾಸಾ ಸಂಸ್ಥೆ ಸ್ಪೇಸ್ ಎಕ್ಸ್ ಯೋಜನೆಯಲ್ಲಿ ಗಗನಯಾನಕ್ಕೆ ಅವಕಾಶ ಕೊಟ್ಟ ಬಳಿಕ ತೆರಳಿರುವ ಇಬ್ಬರು ಗಗನಯಾತ್ರಿಗಳು ಆಗ್ಗಿಂದಾಗ್ಗೆ ಏನಾದರೂ ಚಿತ್ರಗಳನ್ನು ಹಾಕುತ್ತಿರುತ್ತಾರೆ. ಇದೀಗ ಹಗಲು-ರಾತ್ರಿ ಎರಡು ಒಂದೇ ಫ್ರೇಮ್‌ನಲ್ಲಿ ಕಾಣಿಸುವ ರೀತಿಯ ಫೋಟೋ ವೈರಲ್ ಆಗಿದೆ.

ಇಬ್ಬರು ಗಗನಯಾತ್ರಿಗಳ ಪೈಕಿ ಒಬ್ಬರಾಗಿರುವ ರಾಬರ್ಟ್ ಬೆನ್ಕೆನ್, ಇತ್ತೀಚಿಗೆ ಹಗಲು, ಸರಿದು ಇರುಳು ಆಗಮಿಸುವ ವೇಳೆಯ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ತಮ್ಮ‌ ನೆಚ್ಚಿನ ಸಮಯದ ಫೋಟೋ ಎಂದು ವ್ಯಾಖ್ಯಾನಿಸಿರುವ ಅವರು, ಹಗಲು, ರಾತ್ರಿಯ ಗಡಿಯನ್ನು ನೋಡಬಹುದು ಎಂದಿದ್ದಾರೆ.

ಈ ಫೋಟೋ ಇದೀಗ ಭಾರಿ ವೈರಲ್ ಆಗಿದ್ದು, ಸುಮಾರು 54 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಇನ್ನು ಕೆಲವರು ಅಲ್ಲಿನ ಅನುಭವಗಳ‌ ಗಗನಯಾತ್ರಿಗಳ ಬಳಿ ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...