alex Certify ʼಗೋಸುಂಬೆʼ ಹೇಗೆ ಬಣ್ಣ ಬದಲಿಸುತ್ತೆ ಗೊತ್ತಾ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗೋಸುಂಬೆʼ ಹೇಗೆ ಬಣ್ಣ ಬದಲಿಸುತ್ತೆ ಗೊತ್ತಾ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಗೋಸುಂಬೆ ಅಂದರೆ ಊಸರವಳ್ಳಿಯು ಪರಿಸ್ಥಿತಿ ಮತ್ತು ಪರಿಸರಕ್ಕೆ ತಕ್ಕಂತೆ ತನ್ನ ಬಣ್ಣವನ್ನು ಬದಲಿಸುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಈ ಬಣ್ಣ ಬದಲಾವಣೆ ಹೇಗಾಗುತ್ತದೆ ಎಂಬುದು ಮಾತ್ರ ಎಲ್ಲರಿಗೂ ಅಚ್ಚರಿ ತರುತ್ತದೆ. ಗೋಸುಂಬೆಗಳ ಚರ್ಮದ ಬಣ್ಣ ಬದಲಾವಣೆ ಆಗುವುದು ಒಂದು ಆಸಕ್ತಿದಾಯಕ ವಿಚಾರವಾಗಿದೆ. ಇದು ಪರಭಕ್ಷಕಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮತ್ತು ಪರಿಸರ, ಸುರಕ್ಷತೆಗಾಗಿ ಬಣ್ಣವನ್ನು ಬದಲಾವಣೆ ಮಾಡಿಕೊಳ್ಳುತ್ತದೆ.

ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇಂತಹ ತಂತ್ರ ಮಾಡುವ ಅನೇಕ ಜೀವಿಗಳು ಪ್ರಕೃತಿಯ ಮಡಿಲಲ್ಲಿವೆ. ಪರಭಕ್ಷಕಗಳಿಂದ ಅಪಾಯ ಕಾದಿದೆ ಎಂದು ಗೊತ್ತಾದ ತಕ್ಷಣ ಕೆಲವೊಂದು ಸತ್ತಂತೆ ನಟಿಸುತ್ತವೆ, ಇನ್ನೂ ಕೆಲವು ಅತ್ಯಂತ ಕೆಟ್ಟದಾದ ವಾಸನೆಯನ್ನು ಹೊರಸೂಸಿ ಶತೃಗಳನ್ನು ಓಡಿಸುತ್ತವೆ. ಅದೇ ರೀತಿಯಲ್ಲಿ ಗೋಸುಂಬೆಗಳು ತಮ್ಮ ಬಣ್ಣವನ್ನು ಬದಲಿಸುತ್ತವೆ.

ರಾಜ್ಯದ ಹಲವೆಡೆ 4 ದಿನ ಗುಡುಗು, ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ

ತನ್ನ ಜೀವಕ್ಕೆ ಅಪಾಯವಿದೆ ಎಂದು ಗೊತ್ತಾದಾಗ ಗೋಸುಂಬೆ ತನ್ನ ಬಣ್ಣವನ್ನು ಬದಲಿಸಿಕೊಳ್ಳುತ್ತದೆ ಮತ್ತು ಇನ್ನೊಂದು ವಿಚಿತ್ರ ಮತ್ತು ಆಶ್ಚರ್ಯವೆಂದರೆ ತಾನಿರುವ ಸ್ಥಳದಲ್ಲಿನ ಬಣ್ಣಕ್ಕೆ ಬದಲಿಸಿಕೊಳ್ಳುತ್ತದೆ. ಇದರಿಂದಾಗಿ ಶತೃಗಳು ಗೋಸುಂಬೆಯನ್ನು ಸುಲಭವಾಗಿ ಪತ್ತೆ ಮಾಡಲು ಕಷ್ಟಸಾಧ್ಯವಾಗುತ್ತದೆ ಹಾಗೂ ಗೋಸುಂಬೆಯ ಜೀವ ಉಳಿಯುತ್ತದೆ. ಹೀಗೆ ಮಾಡುವ ಗೋಸುಂಬೆ ತನಗೆ ಶತೃ ಕಾಟ ಇಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳುವವರೆಗೆ ಇದ್ದ ಜಾಗದಿಂದ ಕದಲುವುದಿಲ್ಲ.

ಅಷ್ಟಕ್ಕೂ ಈ ಬಣ್ಣ ಬದಲಾವಣೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಗೋಸುಂಬೆಯ ದೇಹದಲ್ಲಿರುವ ಜೀವಕೋಶವು ವಾತಾವರಣಕ್ಕೆ ತಕ್ಕಂತೆ ಬಣ್ಣ ಬದಲಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದು ಅದರ ದೇಹದ ಉಷ್ಣಾಂಶಕ್ಕೆ ಅನುಗುಣವಾಗಿರುತ್ತದೆ. ಉಷ್ಣಾಂಶದ ಪ್ರಕಾರ ಗೋಸುಂಬೆಯ ದೇಹವು ಬೆಳೆಯುತ್ತದೆ ಅಥವಾ ಸಂಕುಚಿತಗೊಳ್ಳುತ್ತದೆ. ದೇಹದಲ್ಲಿರುವ ಹಾರ್ಮೋನ್ ಗಳು ಹೆಚ್ಚಾದಂತೆಲ್ಲಾ ಈ ಜೀವಕೋಶಗಳು ಬಣ್ಣವನ್ನು ಬದಲಾಯಿಸಲು ಆರಂಭವಾಗುತ್ತದೆ. ಈ ಮೂಲಕ ಗೋಸುಂಬೆಯ ಚರ್ಮದ ಬಣ್ಣವು ಹಳದಿ, ಗಾಢ ಕಂದು ಮತ್ತು ಬಿಳಿ ಬಣ್ಣಕ್ಕೆ ತಿರುಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...