
ಅಡಾಲ್ಫ್ ಹಿಟ್ಲರ್ ಯುನೊನಾ ಹಿಂದಿನ ಜರ್ಮನ್ ವಸಾಹತು ಪ್ರದೇಶದಲ್ಲಿ ಶೇಕಡಾ 85ರಷ್ಟು ಮತಗಳಿಸುವಲ್ಲಿ ಯಶಸ್ವಿಯಾದ್ರು. ಈ ಪ್ರದೇಶದಲ್ಲಿ ಜರ್ಮನ್ ಭಾಷೆ ಮಾತನಾಡುವವರ ಸಂಖ್ಯೆ ತುಂಬಾನೆ ಕಡಿಮೆ ಇದೆ.
ಈ ರಾಜಕಾರಣಿಗೆ ಹಿಟ್ಲರ್ ಎಂದು ನಾಮಕರಣ ಮಾಡಿದ್ದು ಇವರ ತಂದೆಯಂತೆ. ಅಡಾಲ್ಫ್ ಹಿಟ್ಲರ್ ಸಿದ್ಧಾಂತಗಳ ಬಗ್ಗೆ ಯಾವುದೇ ಮಾಹಿತಿ ಹೊಂದಿರದ ನನ್ನ ತಂದೆ ನನಗೆ ಈ ಹೆಸರನ್ನ ಇಟ್ಟಿದ್ರು. ಬಾಲ್ಯದಲ್ಲಿ ನನಗೆ ಈ ಹೆಸರಿನ ಹಿಂದಿನ ಯಾವುದೇ ಕತೆಗಳು ಗೊತ್ತಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಹಿಟ್ಲರ್ ಹೆಸರಿನ ಬಗ್ಗೆ ತಿಳಿದುಕೊಂಡೆ ಅಂತಾ ರಾಜಕಾರಣಿ ಹಿಟ್ಲರ್ ಹೇಳಿದ್ರು. ಅಂದಹಾಗೆ ನಮೀಬಿಯಾದ ರಾಜಕಾರಣಿಯ ಹೆಂಡತಿ ಇವರನ್ನ ಅಡಾಲ್ಫ್ ಎಂದು ಕರೆಯುತ್ತಾರಂತೆ.