ನಮೀಬಿಯಾ, ಅಂಗೋಲಾ ಹಾಗೂ ದಕ್ಷಿಣ ಆಫ್ರಿಕಾದ ವಾಯುವ್ಯದಲ್ಲಿರುವ ನಮೀಬ್ ಮರುಭೂಮಿಯಲ್ಲಿರುವ ಫೇರೀ ವೃತ್ತಗಳ ಬಗ್ಗೆ ವಿಜ್ಞಾನಿಗಳು ದಶಕಗಳ ಮಟ್ಟಿಗೆ ತಲೆ ಕೆಡಿಸಿಕೊಂಡು ಸಂಶೋಧನೆ ಮಾಡುತ್ತಿದ್ದರು.
ಪ್ರಿಟೋರಿಯಾ ಹಾಗೂ ಐಟಿಎಂಓನ ವಿವಿಯ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಯೂಫೋರ್ಬಿಯಾ ತಳಿಯ ಸಸಿಗಳು ಮೃತಪಟ್ಟ ಕಾರಣ ಈ ರೀತಿಯ ವೃತ್ತಗಳು ಹುಟ್ಟಿಕೊಂಡಿವೆ ಎಂದು ತಿಳಿದು ಬಂದಿದೆ.
ಥೇಟ್ ಮನುಷ್ಯರಂತೆ ಹಲ್ಲನ್ನ ಹೊಂದಿದೆ ಈ ವಿಚಿತ್ರ ಮೀನು
ಪ್ರಿಟೋರಿಯಾ ವಿವಿಯ ಸಸ್ಯ ಹಾಗೂ ಮಣ್ಣಿನ ವಿಜ್ಞಾನ ಇಲಾಖೆಯ ಪ್ರಾಧ್ಯಾಪಕ ಮರಿಯಾನ್ ಮೆಯರ್ ನೇತೃತ್ವದಲ್ಲಿ 2015ರಲ್ಲಿ ಈ ಕೆಲಸ ಆರಂಭವಾಗಿದೆ. ಪೊದೆಗಳಾದ ಯುಫೋರ್ಬಿಯಾ ಕುರಿತಂತೆ ಅಧ್ಯಯನ ನಡೆಸಿದ ವಿಜ್ಞಾನಿಗಳು, ಈ ಫೇರೀ ವೃತ್ತಗಳ ಹಿಂದಿನ ರಸಾಯನಶಾಸ್ತ್ರ ಹಾಗೂ ಜನವಿಜ್ಞಾನದ ಆಯಾಮಗಳನ್ನು ಸಂಶೋಧಿಸಿದ್ದಾರೆ.
ನಮೀಬಿಯಾದ ಮರಳು ನೀರನ್ನು ಹಿಡಿದಿಟ್ಟುಕೊಳ್ಳಲು ಕ್ಷಮತೆ ಹೊಂದಿರದ ಕಾರಣ, ನೀರು ಹಾಗೂ ಪೋಷಕಾಂಶಗಳ ಲಭ್ಯತೆಯ ಕೊರತೆ ಕಾರಣದಿಂದ ಯುಫೋರ್ಬಿಯಾ ಸಸಿಗಳು ಈ ಬರಪೀಡಿತ ವೃತ್ತಗಳು ಸೃಷ್ಟಿಯಾಗಿವೆ. ಇದರೊಂದಿಗೆ ಕಳೆದ 2-3 ದಶಕಗಳಲ್ಲಿ ಅವ್ಯಾಹತವಾಗಿ ತಾಪಮಾನ ಏರಿಕೆಯಾದ ಕಾರಣದಿಂದಲೂ ಸಹ ಹೀಗೆ ಆಗಿದೆ ಎನ್ನಲಾಗಿದೆ.