alex Certify OMG: ಬಲೂನಿನಂತೆ ಊದಿಕೊಳ್ಳುತ್ತಿದೆ ಈಕೆ ಹೊಟ್ಟೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಬಲೂನಿನಂತೆ ಊದಿಕೊಳ್ಳುತ್ತಿದೆ ಈಕೆ ಹೊಟ್ಟೆ….!

ಕಳೆದ ಎರಡು ವರ್ಷದಿಂದ ಈಕೆಯ ಹೊಟ್ಟೆ ಬಲೂನಿನಂತೆ ಊದಿಕೊಳ್ಳುತ್ತಲೇ ಇದೆ.

121 ಪೌಂಡ್ ತೂಕವಿರುವ ಎರಡು ಮಕ್ಕಳ ಈ ತಾಯಿಯ ಹೊಟ್ಟೆಯೇ 44 ಪೌಂಡ್ ತೂಕವಿದೆ. ಅಂದರೆ ಇಡೀ ದೇಹದ ತೂಕದಲ್ಲಿನ ಶೇ.36 ರಷ್ಟು ತೂಕವು ಹೊಟ್ಟೆಯದ್ದೇ ಇದೆ.

ಚೀನಾದ ಹುವಾಂಗ್ ಗ್ಯುಕ್ಸೈನ್ ಎಂಬಾಕೆ ಈ ಬಾಧೆಯಿಂದ ಬಳಲುತ್ತಿದ್ದು, ಇಂದಿಗೂ ಹೊಟ್ಟೆ ಬೆಳೆಯುತ್ತಲೇ ಇದೆ. ನಿಲ್ಲುವುದೂ ಕಷ್ಟ, ಕೂರುವುದು ಕೂಡ ಸುಲಭವಲ್ಲ. ಮಲಗಲೂ ಸಾಧ್ಯವಿಲ್ಲ. ನಡೆದಾಡಲು ಮೊದಲೇ ಆಗುತ್ತಿಲ್ಲ. ಮಕ್ಕಳನ್ನು ನೋಡಿಕೊಳ್ಳಲೂ ಆಗುತ್ತಿಲ್ಲ. ಹೊರಗಿನ ಜನ ಆಕೆಯನ್ನು ಗರ್ಭಿಣಿ ಎಂದು ಅಪಾರ್ಥ ಮಾಡಿಕೊಂಡಿದ್ದಾರೆ. ನೋವೂ ಇದೆ.

ಚಿಕಿತ್ಸೆಗೆ ಹೆಚ್ಚಿನ ಹಣವೂ ಬೇಕಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೇಣಿಗೆಗಾಗಿ ಬೇಡಿಕೆ ಇಟ್ಟಿದ್ದು, ಇದುವರೆಗೆ 4,320 ಡಾಲರ್ ಸಂಗ್ರಹವಾಗಿದೆ. ಇನ್ನೂ ಹಣದ ಆವಶ್ಯಕತೆ ಇದೆ. ಆಕೆಗೆ ಹಲವು ರೀತಿಯ ಸಮಸ್ಯೆಗಳಿವೆ ಎನ್ನುತ್ತಿರುವ ವೈದ್ಯರು, ಯಕೃತ್ ಸಿರೋಸಿಸ್, ಅಂಡಾಶಯದ ಕ್ಯಾನ್ಸರ್, ಗಡ್ಡೆ ಬೆಳೆದಿದ್ದು, ಹೊಟ್ಟೆ ಹಾಗೂ ಎದೆ ಭಾಗದಲ್ಲಿ ದ್ರವ ತುಂಬಿಕೊಂಡಿದೆ. ಹೀಗಾಗಿಯೇ ಹೊಟ್ಟೆ ಊದಿಕೊಳ್ಳುತ್ತಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...