alex Certify ಮೌತ್ ವಾಶ್​​ಗಿದೆ ಕೊರೊನಾ ಬಗ್ಗು ಬಡಿಯುವ ಸಾಮರ್ಥ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೌತ್ ವಾಶ್​​ಗಿದೆ ಕೊರೊನಾ ಬಗ್ಗು ಬಡಿಯುವ ಸಾಮರ್ಥ್ಯ

ಬಾಯಿಯೊಳಗಿರುವ ಕೀಟಾಣುಗಳು ನಾಶವಾಗಲಿ ಅಂತಾ ಬಳಸುವ ಮೌತ್​ವಾಶ್​​ಗಳು  ಕೊರೊನಾ ವೈರಸ್​ನ್ನೂ ಸಾಯಿಸಬಲ್ಲುವು ಎಂಬ ಕುತೂಹಲಕಾರಿ ಅಂಶ ಅಧ್ಯಯನವೊಂದರಲ್ಲಿ ಬಯಲಾಗಿದೆ.

ಕಾರ್ಡಿಫ್​ ಯೂನಿವರ್ಸಿಟಿಯ ಸಂಶೋಧಕರು‌, ಮೌತ್​ವಾಶ್​ ಕೆಲವೇ ಸೆಕೆಂಡ್​ಗಳಲ್ಲಿ ಕೊರೊನಾ ವೈರಸ್​ಗಳನ್ನ ಸಾಯಿಸುತ್ತವೆ ಎಂದು ಸಾಬೀತುಪಡಿಸಿದ್ದಾರೆ. ಆದರೆ ಈ ಅಧ್ಯಯನದ ಫಲಿತಾಂಶ ಇನ್ನೂ ಅಧಿಕೃತವಾಗಿಲ್ಲ.

ಅಧ್ಯಯನ ಹೇಳುವಂತೆ, ಮೌತ್​ವಾಶ್​ನಲ್ಲಿರುಚ 0.07 ಶೇ. ಸಿಥೈಲ್​​ ಕ್ಲೊರೈಡ್​  ಅಂಶ ಈ ಕೊರೊನಾ ವೈರಸ್​ನ್ನ ನಾಶ ಮಾಡುವ ಗುಣವನ್ನ ಹೊಂದಿವೆಯಂತೆ. ಈ ಮೌತ್​ ವಾಶ್​​ನಿಂದ ಕೊರೊನಾ ಸೋಂಕು ತಗಲುವ ಸಾಧ್ಯತೆ ಕಡಿಮೆ ಮಾಡಬಹುದು. ಆದರೆ ಇದು ಶ್ವಾಸಕೋಶಕ್ಕೆ ತಗುಲಿರುವ ಸೋಂಕನ್ನ ನಾಶ ಮಾಡುವ ಸಾಮರ್ಥ್ಯ ಹೊಂದಿರದ ಕಾರಣ ಈ ಮೌತ್​ವಾಶ್​ ಗಳನ್ನ ಕೊರೊನಾ ವಿರುದ್ಧದ ಚಿಕಿತ್ಸೆಯಾಗಿ ಬಳಕೆ ಮಾಡೋಕೆ ಸಾಧ್ಯವಿಲ್ಲ ಎಂದೂ ಸಂಶೋಧಕರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...