ಮಹಿಳೆಯೊಬ್ಬರ ಬ್ಯಾಗಿನಿಂದ ಇಲಿಯೊಂದು ಹೊರಗೆ ಜಿಗಿದ ಕಾರಣ ಬ್ರಿಟನ್‌ನಲ್ಲಿರುವ ಆಲ್ಡಿ ಸ್ಟೋರ್ ಒಂದರಲ್ಲಿ ಗೊಂದಲಮಯ ಸನ್ನಿವೇಶ ಸೃಷ್ಟಿಯಾಗಿ ಅಂಗಡಿಯನ್ನು ಮುಚ್ಚಬೇಕಾಗಿ ಬಂದಿತ್ತು.
ಬರೋಬ್ಬರಿ 7 ಕೋಟಿ ರೂ. ಮೌಲ್ಯದ ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ಆರೋಪಿಗಳು ಅಂದರ್..!
ಮಹಿಳೆಯ ಸಾಕು ಬೆಕ್ಕಿನಿಂದ ತಪ್ಪಿಸಿಕೊಳ್ಳಲೆಂದು ಇಲಿಯು ಆಕೆ ಬ್ಯಾಗ್ ಒಳಗೆ ಬಂದು ಸೇರಿಕೊಂಡಿತ್ತು. ಐಲ್ ಆಫ್ ವಿಟ್‌ನಲ್ಲಿರುವ ಈ ಸ್ಟೋರ್‌ನಲ್ಲಿ ಶಾಪರ್ ಒಬ್ಬರು ಇನ್ನೇನು ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಇಲಿಯು ಆಕೆಯ ಬ್ಯಾಗ್‌ನಿಂದ ಹೊರಗೆ ಜಿಗಿದಿದೆ. ಅಂಗಡಿಯಲ್ಲೆಲ್ಲಾ ಎರ‍್ರಾಬಿರ‍್ರಿ ಅಡ್ಡಾಡಿದ ಇಲಿಯನ್ನು ಅಂಗಡಿಯ ಸಿಬ್ಬಂದಿ ಬೆನ್ನಟ್ಟಿದ್ದಾರೆ.
2022ರಲ್ಲಿ ಪುನಾರಂಭಗೊಳ್ಳಲಿದೆ ಮೇಣದ ಮ್ಯೂಸಿಯಂ: ಕೋವಿಡ್ ವಾರಿಯರ್ಸ್, ಲಸಿಕೆ ಪಡೆದವರಿಗೆ ಸಿಗಲಿದೆ ವಿನಾಯಿತಿ
ಮೊದಲೇ ಕೋವಿಡ್ ಸಾಂಕ್ರಮಿಕದ ಕಾರಣ ಭಾರೀ ನಿರ್ಬಂಧಗಳ ನಡುವೆ ನಿರ್ವಹಿಸುತ್ತಿರುವ ಸ್ಟೋರ್ ಅನ್ನು ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಮುಚ್ಚಬೇಕಾಗಿ ಬಂತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.