alex Certify ಬರೋಬ್ಬರಿ 7 ಕೋಟಿ ರೂ. ಮೌಲ್ಯದ ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ಆರೋಪಿಗಳು ಅಂದರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 7 ಕೋಟಿ ರೂ. ಮೌಲ್ಯದ ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ಆರೋಪಿಗಳು ಅಂದರ್​..!

ಸುಗಂಧ ದ್ರವ್ಯಗಳಲ್ಲಿ ಬಳಕೆಯಾಗುವ ಬರೋಬ್ಬರಿ 7 ಕೋಟಿ ರೂಪಾಯಿ ಮೌಲ್ಯದ ತಿಮಿಂಗಲದ ವಾಂತಿಯನ್ನ ಕಳ್ಳ ಸಾಗಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜುನಾಗಢ್​​ನಿಂದ ತಿಮಿಂಗಲದ ವಾಂತಿಯನ್ನ ಅಹಮದಾಬಾದ್​​ನಲ್ಲಿರುವ ಕ್ಲೈಂಟ್​ಗೆ ರವಾನಿಸಲು ತೆರಳುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳ ಬಳಿಯಿಂದ ಪೊಲೀಸರು ಬರೋಬ್ಬರಿ 7 ಕೋಟಿ ರೂಪಾಯಿ ಮೌಲ್ಯದ 5.35 ಕೆಜಿ ತಿಮಿಂಗಲದ ವಾಂತಿಯನ್ನ ವಶಪಡಿಸಿಕೊಂಡಿದ್ದಾರೆ.

ನಾವು ಮೂವರು ಆರೋಪಿಗಳನ್ನ ಬಂಧಿಸಿದ್ದು ಅವರಿಂದ 5.35 ಕೆಜಿ ತೂಕದ ತಿಮಿಂಗಲದ ವಾಂತಿಯನ್ನ ವಶಕ್ಕೆ ಪಡೆದಿದ್ದೇವೆ. ಈ ಅಕ್ರಮದಲ್ಲಿ 10 ಮಂದಿ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ತನಿಖೆಯನ್ನ ಮುಂದುವರಿಸಿದ್ದೇವೆ ಎಂದು ಪೊಲೀಸ್​ ಅಧಿಕಾರಿ ಪ್ರೇಮ್​ಸುಖ್​ ದೇಲು ಹೇಳಿದ್ರು.

ಬಂಧಿತ ಆರೋಪಿಗಳನ್ನ ಜುನಾಗಢದ ಶರಿನ್​ ಚೆಡಾ, ಭವನಗರ್​ನ ಖಾಲಿದ್​ ಓಫಿ ಹಾಗೂ ಉದಯ್​ಪುರ್​ನ ಸುಮರ್​ ಸೋನಿ ಎಂದು ಗುರುತಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...