ಬಲ್ಕನ್ ರಾಷ್ಟ್ರಗಳಲ್ಲೊಂದಾದ ಮೊಂಟೆನೆಗ್ರೋದ ಪೊಡ್ಕೋರಿಕಾದಲ್ಲಿ ಕೊರೊನಾದಿಂದ ಮೃತರಾದ ಬಿಷಪ್ ಅಂತ್ಯಕ್ರಿಯೆಯಲ್ಲಿ ಸಾವಿರಾರು ಮಂದಿ ಭಾಗಿಯಾಗುವ ಮೂಲಕ ಕೋವಿಡ್ ಮಾರ್ಗಸೂಚಿಯನ್ನ ಉಲ್ಲಂಘಿಸಿದ್ದಾರೆ.
ಸೆರ್ಬಿಯನ್ ಆರ್ಥೋಡಕ್ಸ್ ಚರ್ಚ್ನ ಬಿಷಪ್ ಐರಿನೆಜ್ ಕೊರೊನಾ ವೈರಸ್ನಿಂದಾಗಿ ಮೃತಪಟ್ಟಿದ್ದರು. ಅವರ ಮೃತದೇಹವನ್ನ ಚರ್ಚ್ ಒಳಗೆ ತರಲಾಗಿದ್ದು ಜನಸ್ತೋಮವೇ ನೆರೆದಿದೆ.
ಚರ್ಚ್ನ ಒಳಗಿದ್ದ ಸಿಬ್ಬಂದಿಯಾಗಲಿ ಭಕ್ತರಾಗಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿದ್ದು ಕಂಡು ಬರಲಿಲ್ಲ. ಮೃತದೇಹದ ಬಳಿಗೇ ಹೋದ ಭಕ್ತರು ಬಿಷಪ್ ಮೃತದೇಹಕ್ಕೆ ಮುತ್ತಿಕ್ಕಿದ್ದಾರೆ.
ಮಾಂಟೆನೆಗ್ರೋದಲ್ಲಿ ಕಳೆದ ಕೆಲದಿನಗಳಿಂದ ಕೊರೊನಾ ಪ್ರಕರಣ ಏರಿಕೆಯಾಗುತ್ತಲೇ ಇದೆ. ಕೋವಿಡ್ ಹರಡುವಿಕೆ ತಡೆಯಲು ಅಧಿಕಾರಿಗಳು ಹೆಣಗಾಡುತ್ತಿರೋದ್ರ ಮಧ್ಯೆಯೇ ನಗರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು ಆತಂಕ ಇನ್ನಷ್ಟು ಹೆಚ್ಚಾಗಿದೆ.