alex Certify ಸಮುದ್ರದಿಂದ ಮನೆಗೆ ತಂದ ವಸ್ತುವಿನಿಂದ ಕಾದಿತ್ತು ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರದಿಂದ ಮನೆಗೆ ತಂದ ವಸ್ತುವಿನಿಂದ ಕಾದಿತ್ತು ಶಾಕ್​..!

ಬ್ರಿಟನ್​​ನಲ್ಲಿ ನೆಲೆಸಿದ್ದ ತಾಯಿ ಹಾಗೂ ಮಗಳು ಅದೃಷ್ಟವಶಾತ್​ ಅಡುಗೆ ಮನೆಯಲ್ಲಿ ಉಂಟಾದ ಗ್ರೆನೇಡ್​ ಸ್ಫೋಟದಿಂದ ಪಾರಾಗಿದ್ದಾರೆ. ಆದರೆ ಗ್ರೆನೇಡ್​ ಅಡುಗೆ ಮನೆಗೆ ಹೇಗೆ ತಲುಪಿತು ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಇದರ ಹಿಂದಿನ ಕತೆ ಕುತೂಹಲಕಾರಿಯಾಗಿದೆ.

38 ವರ್ಷದ ಜೂಡಿ ಕ್ರೂಸ್​ ಹಾಗೂ ಆಕೆಯ ಪುತ್ರಿ 8 ವರ್ಷದ ಇಸಾಬೆಲ್ಲಾ ತಮ್ಮ ಮನೆಯ ಸಮೀಪದಲ್ಲಿದ್ದ ಸಮುದ್ರಕ್ಕೆ ಹೋಗಿದ್ದರು. ಅಲ್ಲಿ ಪಳೆಯುಳಿಕೆ ರೀತಿಯಲ್ಲಿ ಕಂಡ ವಸ್ತುವನ್ನ ಮನೆಗೆ ತೆಗೆದುಕೊಂಡು ಬಂದಿದ್ದಾರೆ.

ಕ್ರೂಸ್​ ಸಂಪೂರ್ಣ ಕತೆಯನ್ನ ಫೇಸ್​ಬುಕ್​ನಲ್ಲಿ ವಿವರಿಸಿದ್ದು ಗ್ರೆನೇಡ್​ ಹಾಗೂ ಹಾನಿಗೊಳಗಾದ ಅಡುಗೆ ಮನೆಯ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅವರು ಅದನ್ನ ತಿಮಿಂಗಲದ ಇಲ್ಲವೇ ಯಾವುದೋ ಪ್ರಾಣಿಯ ಮೂಳೆ ಇರಬಹುದೆಂದು ಭಾವಿಸಿದ್ದರು.

ಆದರೆ ಅದು ಸ್ಫೋಟಗೊಂಡ ಬಳಿಕ ಅದು 2ನೇ ಮಹಾಯುದ್ಧಕ್ಕೆ ಬಳಕೆಯಾದ ಗ್ರೆನೇಡ್​ ಎಂಬ ವಿಚಾರ ತಿಳಿದು ಬಂದಿದೆ. ಅಗ್ನಿಶಾಮಕ ದಳ ಹಾಗೂ ನೆರೆಹೊರೆಯವರ ಸಹಾಯದಿಂದ ಅಡುಗೆ ಮನೆಗೆ ಹೊತ್ತಿಕೊಂಡಿದ್ದ ಬೆಂಕಿಯನ್ನ ನಂದಿಸಲಾಗಿದೆ.

Posted by Jodie Crews on Friday, December 11, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...