ಬ್ರಿಟನ್ನಲ್ಲಿ ನೆಲೆಸಿದ್ದ ತಾಯಿ ಹಾಗೂ ಮಗಳು ಅದೃಷ್ಟವಶಾತ್ ಅಡುಗೆ ಮನೆಯಲ್ಲಿ ಉಂಟಾದ ಗ್ರೆನೇಡ್ ಸ್ಫೋಟದಿಂದ ಪಾರಾಗಿದ್ದಾರೆ. ಆದರೆ ಗ್ರೆನೇಡ್ ಅಡುಗೆ ಮನೆಗೆ ಹೇಗೆ ತಲುಪಿತು ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಇದರ ಹಿಂದಿನ ಕತೆ ಕುತೂಹಲಕಾರಿಯಾಗಿದೆ.
38 ವರ್ಷದ ಜೂಡಿ ಕ್ರೂಸ್ ಹಾಗೂ ಆಕೆಯ ಪುತ್ರಿ 8 ವರ್ಷದ ಇಸಾಬೆಲ್ಲಾ ತಮ್ಮ ಮನೆಯ ಸಮೀಪದಲ್ಲಿದ್ದ ಸಮುದ್ರಕ್ಕೆ ಹೋಗಿದ್ದರು. ಅಲ್ಲಿ ಪಳೆಯುಳಿಕೆ ರೀತಿಯಲ್ಲಿ ಕಂಡ ವಸ್ತುವನ್ನ ಮನೆಗೆ ತೆಗೆದುಕೊಂಡು ಬಂದಿದ್ದಾರೆ.
ಕ್ರೂಸ್ ಸಂಪೂರ್ಣ ಕತೆಯನ್ನ ಫೇಸ್ಬುಕ್ನಲ್ಲಿ ವಿವರಿಸಿದ್ದು ಗ್ರೆನೇಡ್ ಹಾಗೂ ಹಾನಿಗೊಳಗಾದ ಅಡುಗೆ ಮನೆಯ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅವರು ಅದನ್ನ ತಿಮಿಂಗಲದ ಇಲ್ಲವೇ ಯಾವುದೋ ಪ್ರಾಣಿಯ ಮೂಳೆ ಇರಬಹುದೆಂದು ಭಾವಿಸಿದ್ದರು.
ಆದರೆ ಅದು ಸ್ಫೋಟಗೊಂಡ ಬಳಿಕ ಅದು 2ನೇ ಮಹಾಯುದ್ಧಕ್ಕೆ ಬಳಕೆಯಾದ ಗ್ರೆನೇಡ್ ಎಂಬ ವಿಚಾರ ತಿಳಿದು ಬಂದಿದೆ. ಅಗ್ನಿಶಾಮಕ ದಳ ಹಾಗೂ ನೆರೆಹೊರೆಯವರ ಸಹಾಯದಿಂದ ಅಡುಗೆ ಮನೆಗೆ ಹೊತ್ತಿಕೊಂಡಿದ್ದ ಬೆಂಕಿಯನ್ನ ನಂದಿಸಲಾಗಿದೆ.
https://www.facebook.com/photo.php?fbid=10224818164667344&set=pcb.10224818166907400&type=3&__tn__=HH-R&eid=ARDNhSdo95-SgKFKkSu4gbaWD9WE1Yi4n59_N02Vog1r8c55pu–UKfw72DGEi_mqX3kEJBSvqNotLQO