ಕೊರೊನಾ ಸೋಂಕಿಗೆ ಒಳಗಾದ ಮುಕ್ಕಾಲು ಭಾಗದಷ್ಟು ಜನರು ಮುಂದಿನ ಆರು ತಿಂಗಳುಗಳ ಕಾಲ ಕನಿಷ್ಟ ಒಂದು ರೋಗ ಲಕ್ಷಣದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ.
ಹೀಗಾಗಿ ಕೊರೊನಾ ವೈರಸ್ ಬಗ್ಗೆ ಇನ್ನಷ್ಟು ಹೆಚ್ಚಿನ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಚೀನಾದ ನಗರವಾದ ವುಹಾನ್ನಲ್ಲಿ ನೂರಾರು ರೋಗಿಗಳನ್ನ ಒಳಗೊಂಡ ಈ ಸಂಶೋಧನೆಯು ಕೊರೊನಾ ಸೋಂಕಿನ ದೀರ್ಘಕಾಲದ ಲಕ್ಷಣಗಳಗಳನ್ನ ಪತ್ತೆ ಹಚ್ಚಿದೆ. ಕೆಲವರು ಆಯಾಸ ಅಥವಾ ಸ್ನಾಯು ದೌರ್ಬಲ್ಯದಿಂದ ಬಳಲಿದ್ರೆ ಇನ್ನು ಕೆಲವರು ನಿದ್ರಾಹೀನತೆ ತೊಂದರೆಯನ್ನ ಅನುಭವಿಸಿದ್ದಾರೆ.
ಕೊರೊನಾ ಒಂದು ಹೊಸ ಕಾಯಿಲೆ ಆಗಿರೋದ್ರಿಂದ ರೋಗಿಗಳ ಆರೋಗ್ಯದ ಮೇಲೆ ಈ ವೈರಸ್ ದೀರ್ಘಕಾಲದ ಸಮಸ್ಯೆಯನ್ನ ತಂದೊಡ್ಡುತ್ತದೆಯೇ ಅನ್ನೋದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದೇವೆ ಅಂತಾ ರಾಷ್ಟ್ರೀಯ ಉಸಿರಾಟ ಸಮಸ್ಯೆ ಔಷಧಿ ಕೇಂದ್ರದ ಪ್ರಮುಖ ಲೇಖಕ ಬಿನ್ ಕಾವೋ ಹೇಳಿದ್ರು.