alex Certify ಬರ್ತಡೇಯಂದು ತಾಯಿ ತಯಾರಿಸಿದ ಕೇಕ್​ ಕಂಡ ಪುತ್ರನಿಗೆ ಶಾಕ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರ್ತಡೇಯಂದು ತಾಯಿ ತಯಾರಿಸಿದ ಕೇಕ್​ ಕಂಡ ಪುತ್ರನಿಗೆ ಶಾಕ್..!

ತಮ್ಮ ಮಕ್ಕಳ ಜನ್ಮ ದಿನಾಚರಣೆಯ ಸಂಭ್ರಮವನ್ನ ಹೆಚ್ಚು ಮಾಡೋಕೆ ತಾಯಂದಿರು ಇನ್ನಿಲ್ಲದ ಪ್ರಯತ್ನ ಪಡ್ತಾರೆ. ಮಕ್ಕಳಿಗೆ ಇಷ್ಟವಾಗುವ ಉಡುಗೊರೆಗಳು, ಅವರು ಇಷ್ಟ ಪಡೋ ಖಾದ್ಯ ಹೀಗೆ ನಾನಾ ಬಗೆಯ ಸಿದ್ಧತೆಯನ್ನ ಮಾಡುತ್ತಾರೆ.‌

ಇದೇ ರೀತಿ ಆನ್​ಲೈನ್​ ಶಾಪಿಂಗ್​ ಮಾಡೋದ್ರಲ್ಲಿ ಭಾರೀ ಆಸಕ್ತಿ ಹೊಂದಿದ್ದ ಪುತ್ರನ ಬರ್ತಡೇಯನ್ನು ತಾಯಿಯೊಬ್ಬಳು ಥೇಟ್​ ಅಮೆಜಾನ್​ ಪಾರ್ಸೆಲ್​ನಂತೆ ಕಾಣುವ ರೀತಿಯಲ್ಲಿ ಕೇಕ್​ ತಯಾರಿಸಿದ್ದು ಇದರ ಫೋಟೋ ನೋಡಿದ ನೆಟ್ಟಿಗರು ವ್ಹಾವ್​ ಎಂದಿದ್ದಾರೆ.

ಬ್ರಿಟನ್​ನ ಕೇನ್​ ಇವಾನ್ಸ್ ಎಂಬಾತ ಅಮೆಜಾನ್​ ಅಪ್ಲಿಕೇಶನ್​ ಮೂಲಕ ಆನ್​ಲೈನ್​ ಶಾಪಿಂಗ್​ಗಳನ್ನ ಮಾಡ್ತಾನೇ ಇರ್ತಿದ್ದ. ಹೀಗಾಗಿ ಮಗನ 24ನೇ ವರ್ಷದ ಜನ್ಮ ದಿನಕ್ಕೆ ಏನಾದರೊಂದು ವಿಶೇಷವಾದ ಸಪ್ರೈಸ್​ ನೀಡಬೇಕು ಎಂದಿಕೊಂಡಿದ್ದ ತಾಯಿ ಅಮೆಜಾನ್​ ಪಾರ್ಸಲ್​ ಮಾದರಿಯ ಕೇಕ್​ ತಯಾರಿಸಿದ್ದಾರೆ.

ಬೆಳಗ್ಗೆ ಎದ್ದೊಡನೆಯೇ ಕೇಕ್​​ ನೋಡಿದ ಕೇನ್​, ಇದು ಅಮೆಜಾನ್​ ಪಾರ್ಸಲ್​ ಇರಬಹುದೆಂದೇ ಭಾವಿಸಿದ್ದಾನೆ. ಆದರೆ ಇದನ್ನ ಸೂಕ್ಷ್ಮವಾಗಿ ಗಮನಿಸಿದ ಬಳಿಕ ಕೇನ್​ಗೆ ಶಾಕ್​ ಆಗಿದೆ. ಈತನ ತಾಯಿ ನೀನಾ ವೃತ್ತಿಪರ ಕೇಕ್​ ಡಿಸೈನರ್​ ಆಗಿದ್ದು, ನೀನಾ ಕೇಕ್​ ಕ್ಯಾಬಿನ್​ ಎಂಬ ಬೇಕರಿಯನ್ನೂ ನಡೆಸುತ್ತಿದ್ದಾರೆ . ಈಕೆಯ ಅಮೆಜಾನ್​ ಕೇಕ್​ನ್ನು ಚಾಕೊಲೇಟ್​ನಿಂದ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...