alex Certify ಶಾಕಿಂಗ್​: ಜೀವಂತವಿರುವಾಗಲೇ ತಾಯಿಯ ಹೃದಯ ಕೊಯ್ದ ಮೆಡಿಕಲ್​ ವಿದ್ಯಾರ್ಥಿನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಜೀವಂತವಿರುವಾಗಲೇ ತಾಯಿಯ ಹೃದಯ ಕೊಯ್ದ ಮೆಡಿಕಲ್​ ವಿದ್ಯಾರ್ಥಿನಿ..!

ಇನ್ಸ್​ಟಾಗ್ರಾಂ ತಾರೆಯಾಗಿರುವ ಮಾಲ್ಡೋವ್​​ನ ವೈದ್ಯಕೀಯ ವಿದ್ಯಾರ್ಥಿನಿ ಅನ್ನಾ ಲೈಕೋವಿಕ್​​ ತನ್ನ ತಾಯಿಯನ್ನ ಚಾಕುವಿನಿಂದ ಇರಿದು ಕೊಂದಿದ್ದಾಳೆ ಮಾತ್ರವಲ್ಲದೇ ಆಕೆ ಜೀವಂತವಿರುವಾಗಲೇ ತಾಯಿಯ ಹೃದಯ, ಶ್ವಾಸಕೋಶ ಹಾಗೂ ಕರುಳುಗಳನ್ನ ಕಿತ್ತು ಹಾಕಿ ಬಳಿಕ ಎಲ್ಲಾ ರಕ್ತವನ್ನ ಅಳಿಸಿ ಗೆಳೆಯನೊಂದಿಗೆ ಹೊರ ನಡೆದಿದ್ದಾಳೆ.

ಡ್ರಗ್​ ವ್ಯಸನಿಯಾಗಿದ್ದ ಅನ್ನಾ ಬಗ್ಗೆ ತಾಯಿ ಪ್ರಸೋವ್ಯಾ ಲೀಕೋವಿಕ್​ (40) ಕಳವಳಗೊಂಡಿದ್ದರು. ಆಕೆಗೆ ಡ್ರಗ್ ವಿಮೋಚನಾ ಕೇಂದ್ರಕ್ಕೆ ಸೇರ್ಪಡೆಯಾಗೆಂದು ಸಲಹೆಯನ್ನೂ ನೀಡಿದ್ದರು. ಆದರೆ ಇದೇ ವಿಚಾರಕ್ಕೆ ತಾಯಿ ಹಾಗೂ ಮಗಳ ನಡುವೆ ದೊಡ್ಡ ಕಲಹ ಏರ್ಪಟ್ಟಿದೆ.

ಕೋಪಗೊಂಡ ಅನ್ನಾ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ತಾಯಿಯನ್ನ ಇರಿದಿದ್ದಾಳೆ. ಮಾತ್ರವಲ್ಲದೇ ತಾಯಿ ಇನ್ನು ಜೀವಂತ ಇರೋವಾಗಲೆ ಆಕೆಯ ದೇಹವನ್ನ ನೇರವಾಗಿ ಕತ್ತರಿಸಿ ಹೃದಯವನ್ನ ಕಿತ್ತಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...