alex Certify ಈ ಟ್ವಿಟರ್‌ ಖಾತೆಗೆ ಏಕಾಏಕಿ ಹೆಚ್ಚಾಯ್ತು ಫಾಲೋವರ್ಸ್‌ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಟ್ವಿಟರ್‌ ಖಾತೆಗೆ ಏಕಾಏಕಿ ಹೆಚ್ಚಾಯ್ತು ಫಾಲೋವರ್ಸ್‌ ಸಂಖ್ಯೆ

ರಾಬಿನ್​ ಹುಡ್ ಸಮುದಾಯವ​ನ್ನು ರಾಬಿನ್​ಹುಡ್ ಅಪ್ಲಿಕೇಶನ್​ ಎಂದು ತಪ್ಪಾಗಿ ಅರ್ಥೈಸಿಕೊಂಡು ನೆಟ್ಟಿಗರು ಟ್ವಿಟರ್​​ನಲ್ಲಿ ರಾಬಿನ್​ ಹುಡ್​ ಸಮುದಾಯದ ಖಾತೆಯನ್ನ ಅನುಸರಿಸಲು ಆರಂಭಿಸಿದ್ದು ರಾತ್ರೋ ರಾತ್ರಿ ರಾಬಿನ್​ ಹುಡ್ ಸಮುದಾಯದ ಟ್ವಿಟರ್​ ಖಾತೆಯಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ.

ರೆಡ್ಡಿಟ್​​ನಲ್ಲಿ ರಾಬಿನ್​ಹುಡ್​ ಅಪ್ಲಿಕೇಶನ್​ ಸಂಬಂಧಿ ಸುದ್ದಿ ಟ್ರೆಂಡಿಂಗ್​ ಆದ ಬಳಿಕ ರಾಬಿನ್​ಹುಡ್​ ಅಪ್ಲಿಕೇಶನ್​ ಫುಲ್​ ಫೇಮಸ್​ ಆಗಿತ್ತು.

ಸೆಕ್ಸ್ ಡಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಹಾಂ​ಕಾಂಗ್​ ವ್ಯಕ್ತಿ..!

ಗೇಮ್​ಸ್ಟಾಪ್​​ನಂತೆಯೇ ರಾಬಿನ್​ಹುಡ್​ ಇತ್ತೀಚೆಗೆ ತನ್ನ ಬಳಕೆದಾರರಿಗೆ ಸ್ಟಾಕ್​ ಟ್ರೇಡ್​ ಬಗ್ಗೆ ಕೆಲ ನಿರ್ಬಂಧಗಳನ್ನ ವಿಧಿಸಿದೆ. ಈ ಅಪ್ಲಿಕೇಶನ್​ ತನ್ನ ಬಳಕೆದಾರರು ನೋಕಿಯಾ, ಬೆಡ್​ ಬಾತ್​ & ಬಿಯೋಂಡ್​, ಎಎಂಸಿ, ಕೋಸ್​, ಕಾರ್ಪೋರೇಷನ್​, ಬ್ಲಾಕ್​ಬೆರ್ರಿ ಹಾಗೂ ಎಕ್ಸ್​ಪ್ರೆಸ್​ ಇಂಕ್​ಗಳನ್ನ ಖರೀದಿ ಮಾಡದಂತೆ ನಿರ್ಬಂಧ ಹೇರಿದೆ. ಇದರ ಬಳಕೆದಾರರು ರಾಬಿನ್​ ಹುಡ್​ ಅಪ್ಲಿಕೇಶನ್​ ಖಾತೆ ಎಂದು ತಪ್ಪಾಗಿ ಅರ್ಥೈಸಿಕೊಂಡು ರಾಬಿನ್​ ಹುಡ್​ ಸಮದಾಯದ ಖಾತೆಯನ್ನ ಫಾಲೋ ಮಾಡಿದ್ದಾರೆ. ಅಲ್ಲದೇ ಟ್ರೇಡಿಂಗ್​ ಅಪ್ಲಿಕೇಶನ್​ ಬಗ್ಗೆ ಪ್ರಶ್ನೆ ಕೇಳಲು ಆರಂಭಿಸಿದ್ದಾರೆ.

ಟ್ವಿಟರ್​ನಲ್ಲಿ ಬಳಕೆದಾರರ ಸಾಲು ಸಾಲು ಪ್ರಶ್ನೆಗಳ ಬಳಿಕ ರಾಬಿನ್​ ಹುಡ್ ಸಮುದಾಯದ ಟ್ವಿಟರ್ ಖಾತೆ ಬಳಕೆದಾರರು ನೀವೆಂದುಕೊಂಡ ಖಾತೆ ಇದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...