alex Certify ಎರಡನೇ ಮದುವೆಗೆ ಸಾಲ ಕೊಡುತ್ತಂತೆ ಈ ಬ್ಯಾಂಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡನೇ ಮದುವೆಗೆ ಸಾಲ ಕೊಡುತ್ತಂತೆ ಈ ಬ್ಯಾಂಕ್​..!

ಇರಾಕ್​ನ ಬ್ಯಾಂಕ್​ ಒಂದು ಎರಡನೇ ಮದುವೆಯಾಗಬಯಸುವ ಪೌರ ಕಾರ್ಮಿಕರಿಗೆ ಸಾಲ ಸೌಲಭ್ಯ ನೀಡೋದಾಗಿ ಘೋಷಣೆ ಮಾಡಿದೆ. ಇದು ಮಹಿಳಾ ಪರ ನ್ಯಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಅಲ್​ ರಷೀದ್​ ಹೆಸರಿನ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ ಒಂದು ಈ ರೀತಿಯ ಘೋಷಣೆ ಮಾಡಿದೆ. 2 ವರ್ಷಗಳ ಕಾಲ ಸಾರ್ವಜನಿಕ ಸೇವಾ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರು ಈ ಸಾಲ ಸೌಲಭ್ಯ ಪಡೆಯಲು ಯೋಗ್ಯರಾಗಿರ್ತಾರೆ.

ಆದರೆ ಈ ಹಣವನ್ನ ಮೊದಲನೇ ಮದುವೆಗೆ ಬಳಸಿಕೊಳ್ಳುವಂತಿಲ್ಲ. ಎರಡನೇ ಮದುವೆಗೆ ಈ ಬ್ಯಾಂಕ್​ 8389 ಡಾಲರ್​ ಅಂದ್ರೆ 6,19,382 ರೂಪಾಯಿಯನ್ನ ಸಾಲ ರೂಪದಲ್ಲಿ ನೀಡಲಿದೆ.

ಇನ್ನು ಈ ವಿಚಾರವಾಗಿ ಟ್ವೀಟ್​ ಮಾಡಿರುವ ಪ್ರಧಾನಿ ಕಚೇರಿಯ ಮಹಿಳಾ ಅಭಿವೃದ್ಧಿ ಸಲಹೆಗಾರ್ತಿ ಹನಾನ್​ ಅಲ್​ ಫತ್ಲಾವಿ, ಸರ್ಕಾರಿ ಬ್ಯಾಂಕ್​ ಈ ರೀತಿಯ ಆಫರ್​ ನೀಡಿರೋದು ನಾಚಿಕೆಗೇಡು ಅಂತಾ ಕೆಂಡಕಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...