alex Certify ನೋಡನೋಡುತ್ತಿದ್ದಂತೆ 25 ನೇ ಅಂತಸ್ತಿನಿಂದ ಹಾರಿದ ಯುವಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡನೋಡುತ್ತಿದ್ದಂತೆ 25 ನೇ ಅಂತಸ್ತಿನಿಂದ ಹಾರಿದ ಯುವಕರು

ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ರೂಫ್‌ಟಾಪ್ ಬಾರ್‌ ಒಂದರ ಮೇಲಿಂದ ಪ್ಯಾರಾಚೂಟ್ ಕಟ್ಟಿಕೊಂಡ ಇಬ್ಬರು ಯುವಕರು ಡೈವ್‌ ಮಾಡುತ್ತಿರುವುದನ್ನು ನೋಡಬಹುದಾಗಿದೆ.

ನ್ಯಾಶ್‌ವಿಲ್ಲೆಯ ಗ್ರಾಂಡ್ ಹಯಾತ್ ಹೊಟೇಲ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದ ವೇಳೆ 25ನೇ ಮಹಡಿಯಿಂದ ಈ ಇಬ್ಬರು ಜಂಪ್ ಮಾಡಿದ್ದಾರೆ. ಅಲ್ಲಿ ನೆರೆದಿದ್ದ ಜನರಿಗೆ ಏನಾಗುತ್ತಿದೆ ಎಂಬ ಐಡಿಯಾ ಇಲ್ಲದ ಕಾರಣ ಈ ಇಬ್ಬರು ಹಾಗೆ ನೆಗೆಯುತ್ತಲೇ ಗಾಬರಿಯಾಗಿದ್ದಾರೆ.

ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ ವ್ಯಕ್ತಿ ತಕ್ಷಣವೇ ರೈಲಿಂಗ್‌ಗಳ ಬಳಿ ಬಂದು ಜಂಪ್ ಮಾಡಿದ ಯುವಕರು ಪ್ಯಾರಾಚೂಟ್ ‌ಅನ್ನು ತೆರೆದು ಬ್ಯುಸಿ ಬೀದಿಯೊಂದರ ಮೇಲೆ ತೇಲುತ್ತಿರುವ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

ಹೊಟೇಲ್‌ಗೆ ಅತಿಥಿಗಳಾಗಿ ಬಂದಿದ್ದ ಈ ಇಬ್ಬರು ಪುರುಷರ ವಿರುದ್ಧ ಹೊಟೇಲ್ ಮ್ಯಾನೇಜ್‌ಮೆಂಟ್ ದೂರು ದಾಖಲಿಸಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಅಲ್ಲಿದ್ದ ಅತಿಥಿಗಳನ್ನೆಲ್ಲಾ ತೆರವುಗೊಳಿಸಿದ್ದಾರೆ. ಈ ರೀತಿಯ ವರ್ತನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ನ್ಯಾಶ್‌ವಿಲ್ಲೆ ಪೊಲೀಸ್‌ ಇಲಾಖೆ ಹೇಳಿಕೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...