ವಿಶ್ವದಾದ್ಯಂತ ಕೊರೊನಾ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮನೆಯಿಂದ ಹೊರಬಂದು ದಿನಬಳಕೆ ವಸ್ತುಗಳನ್ನು ಕೊಳ್ಳುವುದಕ್ಕೂ ಜನರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಜನರು ಸಹ ಪರ್ಯಾಯ ಮಾರ್ಗಗಳತ್ತ ಒಲವು ವ್ಯಕ್ತಪಡಿಸುತ್ತಿದ್ದಾರೆ.
ಕೊಲಂಬಿಯಾದಲ್ಲಿ 8 ವರ್ಷದ ಲ್ಯಾಬ್ರಡಾರ್ ನಾಯಿಯೊಂದು ಮನೆಗಳಿಗೆ ದಿನಸಿ ವಸ್ತುಗಳನ್ನು ಸರಬರಾಜು ಮಾಡುವ ಕಾರ್ಯದಲ್ಲಿ ತೊಡಗಿದೆ.
ಮೆಡೆಲಿನ್ ಎಂಬ ಪ್ರದೇಶದಲ್ಲಿ ಬೊಟೆರೋ ಕುಟುಂಬ ಮಿನಿ ಮಾರುಕಟ್ಟೆಯನ್ನು ನಡೆಸುತ್ತಿದೆ. ಅವರಿಗೆ ಸೇರಿದ ಎಂಟು ವರ್ಷದ ಇರೋಸ್ ಹೆಸರಿನ ನಾಯಿ ಈಗ ತನ್ನ ಕೆಲಸದಿಂದ ಸುದ್ದಿಯಾಗಿದೆ.
ಈ ನಾಯಿ ತನ್ನ ಬಾಯಿಯಲ್ಲಿ ಸಣ್ಣಪುಟ್ಟ ದಿನ ಬಳಕೆ ವಸ್ತು ಹೊಂದಿದ ಬುಟ್ಟಿಯನ್ನು ಕಚ್ಚಿಕೊಂಡು ಮನೆ ಮನೆಗೆ ತಲುಪಿಸುತ್ತದಂತೆ. ಮನೆ ವಿಳಾಸ ನಾಯಿಗೆ ಹೇಗೆ ಅರಿವಾಗುತ್ತದೆ ಎಂಬುದೇ ಕುತೂಹಲದ ವಿಚಾರ. ಇದೇ ವೇಳೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ನಮಗೆ ನಾಯಿ ಸಹಾಯ ಮಾಡುತ್ತಿದೆ ಎಂದು ಅದರ ಮಾಲೀಕ ಹೇಳಿದ್ದಾರೆ.