alex Certify ದುಡ್ಡು ಪಡೆದು ಗ್ರಾಹಕರಿಗೆ ನೀಡದ ಮೊಬೈಲ್​ ಫೋನ್​: ಫ್ಲಿಪ್​ ಕಾರ್ಟ್​ಗೆ ಭಾರಿ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಡ್ಡು ಪಡೆದು ಗ್ರಾಹಕರಿಗೆ ನೀಡದ ಮೊಬೈಲ್​ ಫೋನ್​: ಫ್ಲಿಪ್​ ಕಾರ್ಟ್​ಗೆ ಭಾರಿ ದಂಡ

ಬೆಂಗಳೂರು: ಕರ್ತವ್ಯಲೋಪ ಎಸಗಿದ ಫ್ಲಿಪ್​ಕಾರ್ಟ್​ಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ.
ಗ್ರಾಹಕರೊಬ್ಬರಿಂದ ಹಣ ಸ್ವೀಕರಿಸಿ ಮೊಬೈಲ್ ಫೋನ್ ಡೆಲಿವರಿ ಮಾಡಿಲ್ಲದ ಕಾರಣದಿಂದ 42 ಸಾವಿರ ರೂಪಾಯಿಗಳನ್ನು ದಂಡದ ರೂಪದಲ್ಲಿ ಗ್ರಾಹಕರಿಗೆ ನೀಡುವಂತೆ ವೇದಿಕೆ ಆದೇಶಿಸಿದೆ.

ಮೊಬೈಲ್​​​ ಫೋನ್​ಗೆಂದು ಗ್ರಾಹಕರು ನೀಡಿದ್ದ 12,499 ರೂ.ವನ್ನು ವಾರ್ಷಿಕ ಶೇಕಡಾ 12ರ ಬಡ್ಡಿಯೊಂದಿಗೆ ಮರುಪಾವತಿಸಬೇಕು. ಇದರ ಜೊತೆಗೆ 20 ಸಾವಿರ ರೂ. ಪರಿಹಾರ ಹಾಗೂ ಕೋರ್ಟ್​ ವೆಚ್ಚದ ರೂಪದಲ್ಲಿ 10 ಸಾವಿರ ರೂ. ನೀಡಬೇಕು ಎಂದು ಕೋರ್ಟ್​ ಹೇಳಿದೆ.

ಗ್ರಾಹಕರು ಫ್ಲಿಪ್​ಕಾರ್ಟ್​ನಲ್ಲಿ ಮೊದಲೇ ಹಣ ನೀಡಿ ಮೊಬೈಲ್​ ಆರ್ಡರ್​ ಮಾಡಿದ್ದರು. ಆದರೆ ಮೊಬೈಲ್​ ಬಂದಿರಲಿಲ್ಲ. ಸಂಸ್ಥೆ ಸರಿಯಾಗಿ ರಿಸ್ಪಾನ್ಸ್​ ಮಾಡಿರಲಿಲ್ಲ. ಆದ್ದರಿಂದ ಅವರು ವೇದಿಕೆ ಮೊರೆ ಹೋಗಿದ್ದರು. ಹೀಗೆ ಮಾಡುವ ಮೂಲಕ ಫ್ಲಿಪ್​ಕಾರ್ಟ್ ಸೇವೆಯಲ್ಲಿ ನಿರ್ಲಕ್ಷ್ಯ ಎಸಗಿದ್ದಲ್ಲದೆ, ಅನೀತಿಯ ವ್ಯಾಪಾರ ಅಭ್ಯಾಸ ನಡೆಸಿದೆ ಎಂದು ಆಯೋಗವು ಆದೇಶದಲ್ಲಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...