alex Certify ತಾಳ್ಮೆ ಕಳೆದುಕೊಂಡ ಮಹಿಳೆಗೆ ವ್ಯಕ್ತಿಯಿಂದ ಮರೆಯಲಾಗದ ಪಾಠ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಳ್ಮೆ ಕಳೆದುಕೊಂಡ ಮಹಿಳೆಗೆ ವ್ಯಕ್ತಿಯಿಂದ ಮರೆಯಲಾಗದ ಪಾಠ…!

ಮೆಕ್​​ಡೊನಾಲ್ಡ್​ನಲ್ಲಿ ಆಹಾರ ಖರೀದಿ ಮಾಡುತ್ತಿದ್ದ ವೇಳೆ ತಾಳ್ಮೆಯಿಲ್ಲದವರಂತೆ ವರ್ತಿಸಿದ ಮಹಿಳೆಯ ವಿರುದ್ಧ ಗ್ರಾಹಕರೊಬ್ಬರು ಚೆನ್ನಾಗಿಯೇ ದ್ವೇಷ ತೀರಿಸಿಕೊಂಡಿದ್ದಾರೆ. ತಾನು ಯಾವ ರೀತಿಯಲ್ಲಿ ಮಹಿಳೆಯ ವಿರುದ್ಧ ರಿವೇಂಜ್​ ತೀರಿಸಿಕೊಂಡೆ ಅನ್ನೋದನ್ನ ವ್ಯಕ್ತಿ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ.

ನಾನು ನನ್ನ ಆಹಾರವನ್ನ ಆರ್ಡರ್​ ಮಾಡಲು ಹೆಚ್ಚು ಸಮಯ ತೆಗೆದುಕೊಳ್ತಿದ್ದ ಕಾರಣ ನನ್ನ ಹಿಂದೆಯೇ ಸಾಲಿನಲ್ಲಿ ನಿಂತಿದ್ದ ಮಹಿಳೆ ತಾಳ್ಮೆ ಇಲ್ಲದವಳಂತೆ ವರ್ತಿಸುತ್ತಿದ್ದಳು. ನಾನು ಫುಡ್​ಗೆ ಬಿಲ್​ ಪಾವತಿಸಿದ ಬಳಿಕ ಆಹಾರವನ್ನ ಪಡೆಯಲು ಇನ್ನೊಂದು ಸಾಲಿಗೆ ಹೋಗಿದ್ದೆ. ಮಹಿಳೆಗೆ ಕ್ಯಾಶಿಯರ್​ ನಿಮ್ಮ ಆರ್ಡರ್​ನ ಹಣವನ್ನ ನಾನು ಪಾವತಿ ಮಾಡಿದ್ದೇನೆ ಅನ್ನೋದನ್ನ ಹೇಳಿದ್ರು. ಕೂಡಲೇ ಮಹಿಳೆ ನನ್ನ ಬಳಿ ತಿರುಗಿ ನೋಡಿದಳು. ಆಕೆಯ ವರ್ತನೆಯ ಮೂಲಕವೇ ಆಕೆ ಮುಜುಗರಕ್ಕೆ ಒಳಗಾಗಿದ್ದಳು ಅನ್ನೋದು ಸ್ಪಷ್ಟವಾಗಿ ತಿಳಿಯುತ್ತಿತ್ತು.

ಕೊರೊನಾ ನಿಯಂತ್ರಣಕ್ಕೆ ಜಾರಿಯಾಗಿದೆ ವಿಚಿತ್ರ ನಿಯಮ: ಒಂದು ಗಂಟೆ ಮಾರುಕಟ್ಟೆಯಲ್ಲಿದ್ರೆ ಬೀಳಲಿದೆ ದಂಡ

ಆದರೆ ನಿಜವಾದ ಮಜಾ ಸಿಕ್ಕಿದ್ದು ಫುಡ್​ನ್ನು ತೆಗೆದುಕೊಳ್ಳುವ ವೇಳೆ……ನಾನು ನನ್ನ ಆರ್ಡರ್​ ಫುಡ್​ನ ಜೊತೆಗೆ ಆಕೆ ಆರ್ಡರ್​ ಮಾಡಿದ್ದ ಫುಡ್​ನ್ನೂ ತೆಗೆದುಕೊಂಡಿದ್ದೆ. ಆಕೆ ಬೆರಗುಗಣ್ಣಿನಿಂದ ನನ್ನನ್ನ ನೋಡ್ತಿದ್ಲು. ನಾನು ಬಿಲ್​ ಪಾವತಿ ಮಾಡಿದ ಫುಡ್​ನ್ನು ತೆಗೆದುಕೊಂಡೆ ಎಂದು ಆಕೆ ಬಳಿ ಹೇಳಿದೆ. ಆಕೆ ಈಗ ಪುನಃ ಉದ್ದದ ಸಾಲಿನಲ್ಲಿ ನಿಂತು ಫುಡ್​ ಆರ್ಡರ್ ಮಾಡಬೇಕು. ಆಕೆ ಇಂದು ಒಳ್ಳೆಯ ಪಾಠವನ್ನೇ ಕಲಿತಿದ್ದಾಳೆ ಎಂದು ಘಟನೆಯನ್ನ ವಿವರಿಸಿದ್ರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...