alex Certify ಅಮೆರಿಕಾ ಪೌರತ್ವದ ನಿರೀಕ್ಷೆಯಲ್ಲಿರುವ ಅನಿವಾಸಿ ಭಾರತೀಯರಿಗೆ ಗುಡ್​ ನ್ಯೂಸ್​​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾ ಪೌರತ್ವದ ನಿರೀಕ್ಷೆಯಲ್ಲಿರುವ ಅನಿವಾಸಿ ಭಾರತೀಯರಿಗೆ ಗುಡ್​ ನ್ಯೂಸ್​​​

ಅಮೆರಿಕದ ಗ್ರೀನ್​ ಕಾರ್ಡ್​ ಹೊಂದಲು ಬಯಸುತ್ತಿರುವ ಅನಿವಾಸಿಗಳಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್​​ ಸರ್ಕಾರ ಯುಎಸ್​ ಪೌರತ್ವ ಕಾಯ್ದೆ 2021ನ್ನು ಜಾರಿಗೆ ತರಲು ಎಲ್ಲಾ ರೀತಿಯ ಸಿದ್ಧತೆಗಳನ್ನ ನಡೆಸಿದೆ. ಈ ಹೊಸ ಕಾನೂನಿನಿಂದಾಗಿ ಅಮೆರಿಕದಲ್ಲಿರುವ ಐಟಿ ವೃತ್ತಿಪರರು ಹಾಗೂ ಇತರೆ ಕೆಲಸಗಾರರಿಗೆ ಅಲ್ಲಿನ ಪೌರತ್ವ ಸಿಗಲಿದೆ. ಗುರುವಾರ ಅಮೆರಿಕ ಕಾಂಗ್ರೆಸ್​ನಲ್ಲಿ ಯುಎಸ್​ ಪೌರತ್ವ ಕಾಯ್ದೆ 2021ನ್ನು ಪರಿಚಯಿಸಲಾಗುವುದು ಎಂದು ವರದಿಯಾಗಿದೆ.

ಅಮೆರಿಕದ ಪೌರತ್ವವನ್ನ ಪಡೆಯುವುದಕ್ಕಾಗಿ ಸಾಕಷ್ಟು ವೃತ್ತಿಪರರು ದಶಕಗಳಿಂದ ತುದಿಗಾಲಲ್ಲಿ ನಿಂತಿದ್ದಾರೆ. ಅನಿವಾಸಿಗಳ ಈ ಕಾಯುವಿಕೆಗೆ ಬಿಡೆನ್​ ಸರ್ಕಾರ ಅಂತ್ಯ ಹಾಡಲು ಹೊರಟಿದೆ. 11 ಮಿಲಿಯನ್​ ದಾಖಲೆ ರಹಿತ ವಲಸಿಗರಿಗೆ ಈ ಕಾಯ್ದೆಯಿಂದ ಲಾಭವಾಗಲಿದೆ. ಈ ಕಾನೂನನ್ನ ಜಾರಿಗೆ ತರುವ ಮುನ್ನ ಅದನ್ನ ಅಮೆರಿಕ ಕಾಂಗ್ರೆಸ್​​ನಲ್ಲಿ ಅಂಗೀಕರಿಸಬೇಕಾಗುತ್ತೆ.

ಹೊಸ ಮಸೂದೆ ಜಾರಿಗೆ ಬಂದ ಬಳಿಕ ಹೆಚ್​ 1 ಬಿ ವೀಸಾ ಹೊಂದಿರುವವರಿಗೆ ಉದ್ಯೋಗದ ದೃಢೀಕರಣ ಸಿಕ್ಕಂತಾಗುತ್ತದೆ. ಈ ಮಸೂದೆಯಿಂದ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದವರಿಗೂ ಲಾಭವಾಗಲಿದೆ. ಏಕೆಂದರೆ ಈ ಕಾರ್ಡ್​ಗಳನ್ನ ಪಡೆಯುವವರಿಗೆ ಶಾಶ್ವತ ಉದ್ಯೋಗ ಕಾರ್ಯಕ್ರಮದಡಿಯಲ್ಲಿ ಸ್ಥಾನ ಸಿಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...