alex Certify ಮೀನಿನ ಕಾರಣಕ್ಕೆ ಎದುರಾಗಿದೆ ಭೂಕಂಪದ ಭೀತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನಿನ ಕಾರಣಕ್ಕೆ ಎದುರಾಗಿದೆ ಭೂಕಂಪದ ಭೀತಿ…!

ಮೆಕ್ಸಿಕೊ: ಉತ್ತರ ಅಮೆರಿಕದ ಮೆಕ್ಸಿಕೊದಲ್ಲಿ ಈಗ ಭೂಕಂಪದ ಭೀತಿ ಹರಡಿದೆ. ಅದಕ್ಕೆ ಕಾರಣ ಒಂದು ಮೀನು. ಅರೆ, ಮೀನಿಗೂ ಭೂಕಂಪಕ್ಕೂ‌ ಏನು‌ ಸಂಬಂಧ ಎನ್ನುತ್ತೀರಾ..? ಮುಂದೆ ಓದಿ.

ದ ಪಿಚಿಲಿಂಗ್ಯೂ ಕಡಲ ತೀರದಲ್ಲಿ ಸಮುದ್ರ ಕೃಷಿ ಮಾಡುವ ಇಂಜಿನಿಯರ್ ಫರ್ನಾಂಡೊ ಕ್ಯಾವೆಲಿನ್ ಹಾಗೂ ಡೇವಿಡ್ ಡೆ ಜಬೆಡೊರಸ್ಕಿ ಎಂಬುವವರಿಗೆ ಭಾನುವಾರ 13 ಅಡಿ ಉದ್ದದ ಔರಾ ಮೀನು ಪತ್ತೆಯಾಗಿದೆ.

ಇದನ್ನು ಭೂಕಂಪದ‌ ಮೀನು ಎಂದೇ ಕರೆಯುತ್ತಾರೆ. ಈ ಮೀನು ಸಿಕ್ಕ ಎರಡು ಮೂರು ದಿನದಲ್ಲಿ ಭೂಕಂಪವಾಗುತ್ತದೆ. ಜಪಾನ್ ಫುಕುಶಿಮಾದಲ್ಲಿ 2011 ರಲ್ಲಿ ಭೂಕಂಪವಾಗುವ ಎರಡು ದಿನ ಮುಂಚೆಯೂ ಅಲ್ಲಿ ಈ ಮೀನು ಪತ್ತೆಯಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಅಷ್ಟೇ ಅಲ್ಲ ಮೆಕ್ಸಿಕೊ ರಾಜ್ಯದ ಔಕ್ಸಾಕಾದ ಕ್ವೀನ್ ಟಾನಾ‌ ರೂ ದಲ್ಲಿ ಈ ವರ್ಷ ಭೂಕಂಪವಾಗುವ ಒಂದು ದಿನ ಮುಂಚೆಯೂ ಈ ಮೀನು ಪತ್ತೆಯಾಗಿತ್ತು ಎನ್ನಲಾಗಿದೆ.

ಫರ್ನಾಂಡೋ ಹಾಗೂ ಡೇವಿಡ್ ಅವರು ಉದ್ದದ ಬೆಳ್ಳಿಯ ಬಣ್ಣದ ಬೃಹತ್ ಮೀನನ್ನು ಹಿಡಿದು ಕಡಲ ತೀರದಲ್ಲಿ ನಿಂತಿರುವ ಸಣ್ಣ ವಿಡಿಯೋ ಕ್ಲಿಪ್ ಒಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೀನು ಸಾವನ್ನಪ್ಪಿದ್ದು, ಕೊಳೆಯುವ ಹಂತದಲ್ಲಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...