ಕೊರೊನಾ ವೈರಸ್ ಬಗ್ಗೆ ಇನ್ನೂ ಹಲವು ಗೊಂದಲಗಳು ಇರುವಾಗಲೇ ಕೆನಡಾದ ಅಧ್ಯಯನವೊಂದು ಕೋವಿಡ್ 19 ಸಾಮಾನ್ಯ ಜ್ವರಕ್ಕಿಂತ ಹೆಚ್ಚು ಭಯಾನಕವಾಗಿದೆ ಎಂದು ಹೇಳಿದೆ.
ಇತರೆ ಯಾವುದೇ ಜ್ವರಕ್ಕಿಂತ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 3.5 ಪಟ್ಟು ಹೆಚ್ಚಿದೆ ಎಂದು ಅಧ್ಯಯನ ಹೇಳಿದೆ.
ಕೊರೊನಾ ವೈರಸ್ ಹಾಗೂ ಜ್ವರಕ್ಕೂ ಯಾವುದೇ ವ್ಯತ್ಯಾಸವಿಲ್ಲ ಹಾಗೂ ಕೊರೊನಾಗಿಂತ ಜ್ವರದಿಂದ ಮೃತರಾದವರ ಸಂಖ್ಯೆಯೇ ಹೆಚ್ಚು ಹೀಗೆ ಹಲವಾರು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಇದೀಗ ಈ ಸಂಶೋಧನೆ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಕೋವಿಡ್ 19 ಸಾಮಾನ್ಯ ಜ್ವರಕ್ಕಿಂತ ಅತಿ ಹೆಚ್ಚು ಭಯಾನಕವಾಗಿದೆ ಎಂಬ ಅಂಶ ಹೊರಬಿದ್ದಿದೆ.
ಬಾತ್ ರೂಮ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ನವ ದಂಪತಿ
ಕೆನಡಿಯನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್ 2019ರ ನವೆಂಬರ್ನಿಂದ 2020ರ ಜೂನ್ 30ರವರೆಗೆ ಕೆನಡಾದ 7 ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ ಸಾಮಾನ್ಯ ಜ್ವರದಿಂದ ಐಸಿಯುವಿನಲ್ಲಿ ದಾಖಲಾದವರು ಹಾಗೂ ಕೊರೊನಾದಿಂದ ಐಸಿಯುವಿನಲ್ಲಿ ಇರುವವರನ್ನ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.
ಈ ಅಧ್ಯಯನದ ಬಳಿಕ ನಾವು ಕೊರೊನಾ ಸಾಮಾನ್ಯ ಜ್ವರಕ್ಕಿಂತ ಅತ್ಯಂತ ಭಯಾನಕವಾಗಿದೆ ಎಂಬ ವಿಚಾರವನ್ನ ಖಂಡಿತವಾಗಿ ಹೇಳಬಹುದಾಗಿದೆ ಎಂದು ಸೇಂಟ್ ಮೈಕೆಲ್ ಆಸ್ಪತ್ರೆಯ ಡಾ. ಅಮೊಲ್ ವರ್ಮಾ ಹೇಳಿದ್ದಾರೆ.