alex Certify ಜೀವ ಉಳಿಯಲು ಕಾರಣವಾಯ್ತು ದೊಡ್ಡ ಹೊಟ್ಟೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವ ಉಳಿಯಲು ಕಾರಣವಾಯ್ತು ದೊಡ್ಡ ಹೊಟ್ಟೆ…!

ಲುಯಾಂಗ್ ಹೆನಾನ್: ದೊಡ್ಡ ಹೊಟ್ಟೆ ಕರಗಿಸುವ ಸಲುವಾಗಿ ಜನ ಏನೆಲ್ಲ ಕಸರತ್ತು ಮಾಡುತ್ತಾರೆ. ಕೆಲವು ಬಾರಿ ದೊಡ್ಡ ಹೊಟ್ಟೆಯೂ ಅನುಕೂಲಕ್ಕೆ ಬರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಅಧಿಕ ಭಾರದ ವ್ಯಕ್ತಿಯೊಬ್ಬನ ದೊಡ್ಡ ಹೊಟ್ಟೆ ಆತ ಬಾವಿಗೆ ಬಿದ್ದು, ಜೀವ ಕಳೆದುಕೊಳ್ಳುವ ಅಪಾಯದಿಂದ ಬಚಾವು ಮಾಡಿದ ಅಪರೂಪದ ಘಟನೆ ಚೀನಾದಲ್ಲಿ ನಡೆದಿದೆ.

ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಲುಯಾಂಗ್ ನಗರದ 28 ವರ್ಷದ ಲಿಯು ಎಂಬ ವ್ಯಕ್ತಿಯ ಮನೆಯ ಬಾವಿಗೆ ಹಾಕಿದ್ದ ಮರದ ಮುಚ್ಚಳ ಮುರಿದು ಆತ ಬಾವಿಗೆ ಬೀಳುವ ಸಂಭವವಿತ್ತು. ಆದರೆ, ಲಿಯು ಸಾಕಷ್ಟು ದೊಡ್ಡ ಹೊಟ್ಟೆ ಹೊಂದಿದ್ದ ಕಾರಣ ಆತ ಬಾವಿ ಕಟ್ಟೆಗೆ ಸಿಕ್ಕಿಕೊಂಡು ಬಚಾವಾಗಿದ್ದಾನೆ.

ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಆತನನ್ನು ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ದಳದವರು ರಕ್ಷಣೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

“ನಾವು ಸ್ಥಳಕ್ಕೆ ತೆರಳುವ ಹೊತ್ತಿಗೆ ವ್ಯಕ್ತಿ ಬಾವಿಯ ಕಟ್ಟೆಗೆ ಗಟ್ಟಿಯಾಗಿ ಸಿಲುಕಿಕೊಂಡಿದ್ದ. ಹಗ್ಗ ಬಳಸಿ ಆತನನ್ನು ಹೊರಗೆ ಎಳೆಯಲಾಯಿತು” ಎಂದು ಲುಯಾಂಗ್ ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...