alex Certify ಅಬ್ಬಾ…!. ಕಳೆದೊಂದು ವರ್ಷದಿಂದ ಈತ ಎದುರಿಸುತ್ತಿರೋ ಸಮಸ್ಯೆ ಕೇಳಿದ್ರೆ ಶಾಕ್​ ಆಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ…!. ಕಳೆದೊಂದು ವರ್ಷದಿಂದ ಈತ ಎದುರಿಸುತ್ತಿರೋ ಸಮಸ್ಯೆ ಕೇಳಿದ್ರೆ ಶಾಕ್​ ಆಗ್ತೀರಾ..!

ತೇಗು ಮನುಷ್ಯನಿಗೆ ಇರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಈ ತೇಗು ಅಬ್ಬಬ್ಬಾ ಅಂದರೆ ಒಂದಿನ ಇರಬಹುದು. ಕೆಲವರಿಗೆ ಇದು ಎರಡು ದಿನಗಳವರೆಗೆ ಹೋಗಬಹುದು. ಆದರೆ ಬ್ರಿಟನ್​​ನ ಒಬ್ಬ ವ್ಯಕ್ತಿಗೆ ಇದು 8 ತಿಂಗಳವರೆಗೆ ಮುಂದುವರಿದಿದೆ.

ಎರಡು ಮಕ್ಕಳ ತಂದೆಯಾಗಿರುವ ಮೈಕೆಲ್​ ಈ ಹಿಂದೆ ಕ್ಯಾಬ್​ ಡ್ರೈವರ್​ ಆಗಿದ್ದರು. ಈತ ಕಳೆದ 8 ತಿಂಗಳಿನಿಂದ ತೇಗಿನ ಸಮಸ್ಯೆ ಎದುರಿಸುತ್ತಲೇ ಇದ್ದು ನಿಮಿಷದಿಂದ ನಿಮಿಷಕ್ಕೆ ಬರ್ತಾನೇ ಇರುತ್ತಂತೆ.

ಪ್ರತಿ 7 ನಿಮಿಷಕ್ಕೆ ಒಮ್ಮೆ ಈ ಸಮಸ್ಯೆ ಬರ್ತಿರೋದನ್ನ ಗಮನಿಸಿದ ಮೈಕೆಲ್​ ಆಸ್ಪತ್ರೆಗಳಿಗೂ ಭೇಟಿ ನೀಡಿದ್ದಾರೆ. ಆದರೆ ದಿನದಿಂದ ದಿನಕ್ಕೆ ಈ ತೇಗಿನ ಶಬ್ದ ಹೆಚ್ಚಾಗುತ್ತಲೇ ಹೋಗಿದೆ.

61 ವರ್ಷದ ಈ ವ್ಯಕ್ತಿಯ ಸಮಸ್ಯೆ ವೈದ್ಯ ಲೋಕಕ್ಕೆ ಒಂದು ಸವಾಲಾಗಿ ಪರಿಣಮಿಸಿದೆ. ಜೂನ್​ 2020ರಂದು ಒಂದು ಲೋಟ ಚಹ ಕುಡಿದ ಬಳಿಕ ಮೈಕೆಲ್​ಗೆ ಈ ಸಮಸ್ಯೆ ಶುರುವಾಗಿತ್ತಂತೆ. ಅಲ್ಲಿಂದ ಈ ಸಮಸ್ಯೆ ನಿಂತೇ ಇಲ್ವಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...