alex Certify ಲಾಕ್‌ ಡೌನ್ ನಿಂದ ಕೆಲಸ ಕಳೆದುಕೊಂಡವನೀಗ ಕೋಟ್ಯಾಧೀಶ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್‌ ಡೌನ್ ನಿಂದ ಕೆಲಸ ಕಳೆದುಕೊಂಡವನೀಗ ಕೋಟ್ಯಾಧೀಶ…!

ವೆಲ್ಲಿಂಗ್ಟನ್: ಕರೋನಾ‌ ಲಾಕ್‌ಡೌನ್ ನಿಂದ ಆತ ಕೆಲಸ ಕಳೆದುಕೊಂಡಿದ್ದ. ಆದರೂ ಕೋಟ್ಯಧೀಶನಾದ.‌ ಅದ್ಹೇಗೆ ಗೊತ್ತಾ….?

ನ್ಯೂಜಿಲೆಂಡ್ ನ ಮೈ ಲೋಟೊ ಎಂಬ ಲಾಟರಿ ಬಹುಮಾನ ಹ್ಯಾಮಿಲ್ಟನ್ ನಗರದ ವ್ಯಕ್ತಿಗೆ ಸಿಕ್ಕಿದೆ. ಪರಿಣಾಮ ವ್ಯಕ್ತಿ ಒಂದೇ ದಿನದಲ್ಲಿ 10.3 ಮಿಲಿಯನ್ ನ್ಯೂಜಿಲ್ಯಾಂಡ್ ಡಾಲರ್(47.7 ಕೋಟಿ ರೂಪಾಯಿ) ಒಡೆಯನಾಗಿದ್ದಾನೆ.

ಅದೃಷ್ಟವಂತನ ಪತ್ನಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಅವರು ಕೆಲಸ ಮುಗಿಸಿ‌ ಮನೆಗೆ ಬಂದಾಗ ಅಚ್ಚರಿ ಕಾದಿತ್ತು‌.

“ನಾನು ಬರುವಾಗ ಪತಿ ಅಡುಗೆ ಮನೆಯಲ್ಲಿ ಕುಳಿತು ವಿಚಿತ್ರವಾಗಿ ವರ್ತಿಸುತ್ತಿದ್ದರು. ನನ್ನ ಕೈಗೆ ಒಂದು ಲಕೋಟೆಯನ್ನಿಟ್ಟು ನೋಡಲು ಹೇಳಿದರು. ಅದರಲ್ಲಿ ಪತ್ರಿಕೆಯೊಂದರ ತುಣುಕು ಇತ್ತು. ಅದರಲ್ಲಿ ಹ್ಯಾಮಿಲ್ಟನ್ ವ್ಯಕ್ತಿಯೊಬ್ಬರು 10.3 ಮಿಲಿಯನ್ ಡಾಲರ್ ಗೆದ್ದಿದ್ದಾರೆ ಎಂದು ಬರೆದಿತ್ತು. ಇದನ್ನು ನನಗೇಕೆ ತೋರಿಸುತ್ತಿದ್ದೀರಿ..? ಎಂದು ಕೇಳಿದೆ. ಆ ಹಣ ಗೆದ್ದಿರುವುದು ನಾವೇ ಎಂದು ಹೇಳಿದರು. ಅವರು ಜೋಕ್ ಮಾಡುತ್ತಿದ್ದಾರೆ ಎಂದುಕೊಂಡೆ” ಎಂದು ಮಹಿಳೆ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದಾಳೆ.

ಲಾಟರಿ ಗೆದ್ದ ಬಗ್ಗೆ ಮೈ ಲೋಟೊದಿಂದ ಇ ಮೇಲ್ ಸಂದೇಶವೊಂದು ಬಂದಿತ್ತು. ಅದನ್ನು ನೋಡಿದಾಗ ಲಾಟರಿ ಗೆದ್ದಿರುವುದು ಖಚಿತವಾಯಿತು ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಲಾಟರಿ ಹಣ ದಂಪತಿಯ ಕಾರು ರಿಪೇರಿ ಕಾರ್ಯಕ್ಕೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿದೆ. ಉಳಿದ ಹಣವನ್ನು ತೊಂದರೆ ಇದ್ದವರಿಗೆ ನೆರವಾಗಲು ವಿನಿಯೋಗಿಸುತ್ತೇವೆ ಎಂದು ದಂಪತಿ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...