alex Certify ಕ್ಯಾನ್ಸರ್ ನಿಂದ ವೃಷಣ ಕಳೆದುಕೊಂಡಿದ್ದರೂ ಮಗು ಜನನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್ ನಿಂದ ವೃಷಣ ಕಳೆದುಕೊಂಡಿದ್ದರೂ ಮಗು ಜನನ

ತಮಗೆ ಮಗುವಾದ ವಿಚಾರವನ್ನು ಈ ದಂಪತಿ ಪವಾಡ ಎಂದೇ ನಂಬಿದ್ದಾರೆ.
ತಾನು ತಂದೆಯಾಗಲು ಸಾಧ್ಯವೇ ಎಂದು ಚಿಂತೆಯಲ್ಲಿದ್ದ ಜೋಸೆಫ್ ಎಂಬಾತನಿಗೆ ತನ್ನ ಪತ್ನಿ ಗರ್ಭಿಣಿಯಾದ ಸುದ್ದಿ ನಂಬಲು ಅಸಾಧ್ಯವಾಗಿತ್ತು. ಇದೀಗ ಮಾರ್ಚ್ ನಲ್ಲಿ ಆ ದಂಪತಿಗೆ ಮಗು ಜನಿಸಿದ್ದು, ಜಾಕೋಬ್ ಎಂದು ನಾಮಕರಣ ಮಾಡಿದ್ದಾರೆ.

29 ವರ್ಷದ ಜೋಸೆಫ್ ಕ್ಯಾನ್ಸರ್ ನಿಂದ ತನ್ನ‌ ಬಲ ವೃಷಣ ಕಳೆದುಕೊಂಡಿದ್ದ. ಬಳಿಕ ತಂದೆಯಾಗುವ ಸಾಮರ್ಥ್ಯ ಕಳೆದುಕೊಂಡೆನೆಂದೇ ಆತ ಭಾವಿಸಿದ್ದ.

ಆತ ಒಂದು ದಿನ ಓಟದಲ್ಲಿ ತೊಡಗಿದ್ದಾಗ ತೊಡೆ ಸಂದಿನಲ್ಲಿ ನೋವು ಅನುಭವಿಸಿದ್ದ. ಕೆಲವು ದಿನಗಳ ನಂತರ ಅವನ ಬಲಭಾಗದ ವೃಷಣ ಮೂರು ಪಟ್ಟು ದೊಡ್ಡದಾಗಿತ್ತು. ಅದನ್ನು ಪರೀಕ್ಷಿಸಿದಾಗ ಕ್ಯಾನ್ಸರ್ ಇರುವುದನ್ನು ಗುರುತಿಸಲಾಯಿತು.

ಕ್ಯಾನ್ಸರ್ ನಿಂದ ಪಾರಾಗಲು ವೃಷಣವನ್ನು ತೆಗೆದುಹಾಕುವ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದರು, ಆ ಸುದ್ದಿ ಆತನಿಗೆ ಗಾಬರಿಯಾದರೂ ಅದನ್ನು ತೆಗೆದುಹಾಕುವುದು ಅನಿವಾರ್ಯವಾಗಿತ್ತು.

ಮೂರು ತಿಂಗಳ ಮೇಲ್ವಿಚಾರಣೆ ನಂತರ ಆತ ತನ್ನ ಪತ್ನಿಯೊಂದಿಗೆ ಸಾಮಾನ್ಯ ಜೀವನ ಆರಂಭಿಸಿದ. ಜೊತೆಗೆ ಫರ್ಟಿಲಿಟಿ ಚಿಕಿತ್ಸಾಲಯ ಒಂದರಲ್ಲಿ ತನ್ನ ವೀರ್ಯವನ್ನು ಸಂಗ್ರಹಿಸಿ, ತಾನು ಅಪ್ಪನಾಗಬೇಕೆಂಬ ಕನಸನ್ನು ಸಹ ಉಳಿಸಿಕೊಂಡಿದ್ದ. ಈ ನಡುವೆ ಐವಿಎಫ್ ಇಲ್ಲದೇ ಸ್ವಾಭಾವಿಕವಾಗಿ ಪತ್ನಿ ಗರ್ಭ ಧರಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...