alex Certify ಬೆರಗಾಗಿಸುತ್ತೆ ಬೆನ್ನಿನಿಂದ ಹಣ್ಣನ್ನು ಕತ್ತರಿಸುವ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಬೆನ್ನಿನಿಂದ ಹಣ್ಣನ್ನು ಕತ್ತರಿಸುವ ವಿಡಿಯೋ

ಸಾಮಾಜಿಕ ಜಾಲತಾಣ ವಿನೋದದ ಗುಚ್ಛ. ಸಾಕಷ್ಟು ಪ್ರತಿಭಾವಂತರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ, ಬೆಳೆಯುವ ಕೇಂದ್ರವೂ ಹೌದು, ಟ್ವಿಟರ್, ಫೇಸ್ಬುಕ್, ಟಿಕ್‌ ಟಾಕ್, ಇನ್ಸ್ಟಾಗ್ರಾಂ, ಯೂ ಟ್ಯೂಬ್ ಹೀಗೆ ಹಲವಾರು ಜಾಲತಾಣಗಳಿವೆ. ಒಮ್ಮೆ ನೆಟ್ಟಿಗರಿಗೆ ಇಷ್ಟವಾಗಿ ಬಿಟ್ಟರೆ ಅವರ ವಿಡಿಯೋ, ಫೋಟೋಗಳನ್ನು ಅವರೇ ಸಾಕಷ್ಟು ಪ್ರಚಾರ ಮಾಡಿಬಿಡುತ್ತಾರೆ.

ಜಾರ್ಜ್ ಬಿಂಘಂ ಎಂಬ ವ್ಯಕ್ತಿ ಟಿಕ್‌ ಟಾಕ್ ನಲ್ಲಿ ಅಪ್ಲೋಡ್ ಮಾಡಿದ ವಿಡಿಯೋ ಚಪ್ಪಾಳೆ ಗಿಟ್ಟಿಸುತ್ತಿದೆ. ಸಾಕಷ್ಟು ವೈರಲ್ ಆಗಿದೆ.
ಅವರ ಬೆನ್ನಿನ ಎರಡೂ ಪಕ್ಕೆಲುಬುಗಳನ್ನು ಅಡ್ಡವಾಗಿ ಬಾಗಿಸಿ ಪರಸ್ಪರ ಜೋಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಎಲ್ಲರಿಂದಲೂ ಸಾಧ್ಯವಾಗದ ಅಪರೂಪದ ಕೌಶಲ್ಯವನ್ನು ಅವರು ರೂಢಿಸಿಕೊಂಡಿದ್ದಾರೆ.‌

ತಮ್ಮ ಭುಜದ ಎರಡೂ ತುದಿಗಳನ್ನು ಬೆನ್ನಿನ ಭಾಗದಿಂದ ಜೋಡಿಸಿ ಅದರ ನಡುವೆ ಕಿತ್ತಳೆ ಹಣ್ಣು, ಮೊಟ್ಟೆ ಇಟ್ಟು ಒಡೆದು ಹಾಕುವ ವಿಡಿಯೋ ಟಿಕ್ ಟಾಕ್ ನಲ್ಲಿ ವೈರಲ್ ಆಗಿದೆ.‌‌ ಅವರ ಈ ಅಪರೂಪದ ಸಾಮರ್ಥ್ಯಕ್ಕೆ ನೆಟ್ಟಿಗರು‌ ಜೈ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...