alex Certify 10 ವರ್ಷಗಳ ಕಾಲ ಪ್ರತಿದಿನ ಸೆಲ್ಫಿ ತೆಗೆದುಕೊಳ್ತಿದ್ದ ಯುವಕ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ವರ್ಷಗಳ ಕಾಲ ಪ್ರತಿದಿನ ಸೆಲ್ಫಿ ತೆಗೆದುಕೊಳ್ತಿದ್ದ ಯುವಕ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​

14 ರಿಂದ 24 ವರ್ಷ ವಯಸ್ಸಿನವರೆಗೆ ಪ್ರತಿದಿನ ತನ್ನ ಸೆಲ್ಫಿಗಳನ್ನ ಕ್ಲಿಕ್ಕಿಸಿಕೊಳ್ತಿದ್ದ ಯುವಕನೊಬ್ಬ ಒಂದು ದಶಕಗಳ ಕಾಲದಲ್ಲಿ ದಿನನಿತ್ಯ ತಾನು ತೆಗೆದ ಫೋಟೋಗಳನ್ನ ಸೇರಿಸಿ ವಿಡಿಯೋ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನಿಯಾಲ್​ ಗ್ರೇ ಈ ವಿಡಿಯೋವನ್ನ ಪೋಸ್ಟ್ ಮಾಡಿ, ನಾನು ಕಳೆದ 10 ವರ್ಷಗಳಿಂದ ನಿತ್ಯ ನನ್ನ ಸೆಲ್ಫಿಯನ್ನ ತೆಗೆದುಕೊಳ್ತಿದ್ದೆ. ಇದು 14 ರಿಂದ 24 ವಯಸ್ಸಿನ ನಾನು ಎಂದು ಶೀರ್ಷಿಕೆ ನೀಡಿದ್ದಾರೆ. ವಿಡಿಯೋದಲ್ಲಿ ನಿಯಾಲ್ 14 ರಿಂದ 24 ವರ್ಷಕ್ಕೆ ಬೆಳೆಯುತ್ತಿರುವ ವೇಳೆ ಆತನ ಮುಖ ಚರ್ಯೆಯಲ್ಲಾದ ಬದಲಾವಣೆಗಳನ್ನ ಗಮನಿಸಬಹುದಾಗಿದೆ.

ಈ ವಿಡಿಯೋ 1.4 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಹೆಚ್ಚಿನ ನೆಟ್ಟಿಗರು ಈ ಯುವಕನ ಹೇರ್​ಸ್ಟೈಲ್​ನಲ್ಲಾದ ಬದಲಾವಣೆಗಳ ಬಗ್ಗೆ ಮಾತನಾಡಿದ್ರೆ, ಇನ್ನೂ ಹಲವರು 10 ವರ್ಷಗಳ ಕಾಲ ಪ್ರತಿದಿನ ಫೋಟೋ ತೆಗೆದುಕೊಳ್ತಿದ್ದ ಬದ್ಧತೆಯನ್ನ ಪ್ರಶಂಸಿಸಿದ್ದಾರೆ.

— Niall Gray (@NiallGray) January 1, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...