ಪ್ರಪಂಚದಲ್ಲಿ ಒಬ್ಬ ಮನುಷ್ಯನನ್ನ ಹೋಲುವ ಏಳು ಮಂದಿ ಇರುತ್ತಾರಂತೆ.
ಸಾಧಾರಣವಾಗಿ ಈ ಮಾತನ್ನು ಕೇಳಿಯೇ ಇರುತ್ತೇವೆ. ಇದನ್ನು ಬಹಳ ಜನರು ಹೇಳುತ್ತಾರೆ ಕೂಡ. ಅಷ್ಟೇ ಅಲ್ಲ, ಪರಸ್ಪರ ಹೋಲಿಕೆಯಿರುವ ಆ ಏಳು ಜನರು ಜೀವನದಲ್ಲಿ ಒಮ್ಮೆಯೂ ಸಂಧಿಸುವುದಿಲ್ಲವಂತೆ.
ಈ ಅನುಭವ ನಮ್ಮಲ್ಲೇ ಬಹಳಷ್ಟು ಜನರಿಗೆ ಆಗಿರಲೂಬಹುದು. ಪರಿಚಿತರೆಂದು ಹತ್ತಿರ ಹೋಗುತ್ತೇವೆ, ಮಾತನ್ನೂ ಆಡಿಸಿರುತ್ತೇವೆ. ಆದರೆ, ಅವರು ನಮ್ಮ ಪರಿಚಿತರಲ್ಲ ಎಂಬುದು ಗೊತ್ತಾದ ಮೇಲೆ ಪೆಚ್ಚಾಗುತ್ತೇವೆ.
ಇಂಗ್ಲೆಂಡಿನ ಸ್ಟಾಕ್ ಪೋರ್ಟ್ ಎಂಬಲ್ಲಿ ಇಂತಹುದೇ ತದ್ರೂಪಿಗಳು ಒಬ್ಬರನ್ನೊಬ್ಬರು ಸಂಧಿಸಿದ್ದು, ನೋಡಲು ತನ್ನಂತೆಯೇ ಇರುವಾತನನ್ನ ಕಂಡು ಚಕಿತಗೊಂಡ ಘಟನೆ ನಡೆದಿದೆ. ಹೌದು, ಮೈಕಲ್ ಕೊರೋಪಿಜ್ ಎಂಬಾತ, ತನ್ನನ್ನೇ ಹೋಲುವ ವ್ಯಕ್ತಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಕಂಡು ಬೆಕ್ಕಸಬೆರಗಾಗಿದ್ದಾರೆ.
19 ನೇ ಶತಮಾನದ ವಸ್ತ್ರ ವಿನ್ಯಾಸದ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಮೈಕಲ್, ಆ ಕಾಲದ ಸೂಟ್, ಕೇಶವಿನ್ಯಾಸ ಮಾಡಿಕೊಳ್ಳುವ ಗೀಳು ಇಟ್ಟಿಕೊಂಡಿದ್ದಾನೆ. ಈ ಕಾರಣಕ್ಕಾಗಿಯೇ ಆಧುನಿಕ ದಿನಗಳ ವಿಕ್ಟೋರಿಯಾ ಎಂದೇ ಬಿಂಬಿತಗೊಂಡಿರುವ ಈತ, ಆ ಕಾಲಘಟ್ಟದ ವಸ್ತ್ರಗಳಿಗಾಗಿಯೇ ಒಂದಿಡೀ ಅಲ್ಮೆರಾವನ್ನೇ ಮೀಸಲಿಟ್ಟಿದ್ದಾನೆ.
ಇದೇ ರೀತಿ ಆ ಕಾಲದ ವಸ್ತ್ರ ತೊಟ್ಟ ಮತ್ತೊಬ್ಬ ವ್ಯಕ್ತಿಯ ಫೋಟೋ ಇನ್ ಸ್ಟಾಗ್ರಾಮ್ ನಲ್ಲಿ ಗಮನ ಸೆಳೆದಿದ್ದು, ಸುಮಾರು 115 ವರ್ಷಗಳ ಹಿಂದೆ ಇದ್ದ ವ್ಯಕ್ತಿಯೊಬ್ಬನ ಚಿತ್ರ ಅದು ಎನ್ನಲಾಗಿದೆ. ಇದರ ಜಾಡು ಹಿಡಿದು ಹೊರಟ ಮೈಕೆಲ್ ಅಚ್ಚರಿ ವ್ಯಕ್ತಪಡಿಸಿದ್ದು, ಅದು ನಕಲಿ ಫೋಟೋ ಕೂಡ ಅಲ್ಲ. ಆ ಫೋಟೋ ಹಾಗೂ ಅದರಲ್ಲಿರುವ ವ್ಯಕ್ತಿ ಇದ್ದದ್ದು ನಿಜ. ಅದರಲ್ಲಿರುವ ವ್ಯಕ್ತಿಗೂ ನನಗೂ ಸಾಕಷ್ಟು ಸಾಮ್ಯತೆ ಇದೆ. ನನಗೂ ಇದು ಆಶ್ಚರ್ಯ ತರಿಸಿದೆ. ಬಹುಶಃ ಇದು ನನ್ನದೇ ಹಿಂದಿನ ಜನ್ಮದ ಫೋಟೋ ಇದ್ದರೂ ಇರಬಹುದು ಎಂದಿದ್ದಾರೆ.
https://www.facebook.com/mr.koropisz/videos/635315267231691