alex Certify ಚಾಲಕನಿಲ್ಲದೇ ಸಂಚರಿಸಿದ ಕಾರು: ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲಕನಿಲ್ಲದೇ ಸಂಚರಿಸಿದ ಕಾರು: ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​

ನೂತನ ತಂತ್ರಜ್ಞಾನಗಳ ಮೂಲಕವೇ ಟೆಸ್ಲಾ ಕಂಪನಿಯ ಕಾರುಗಳು ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಲೇ ಇರುತ್ತವೆ. ಆಟೋಪೈಲಟ್ ಅಥವಾ ರಿಮೋಟ್​ ಡ್ರೈವಿಂಗ್​ ಸೌಲಭ್ಯಗಳಿಂದಾಗಿ ಟೆಸ್ಲಾ ಗ್ರಾಹಕರನ್ನ ಹೆಚ್ಚಾಗಿಯೇ ಸೆಳೆಯುತ್ತಿದೆ.

ಇದೇ ಕಾರಣಕ್ಕಾಗಿಯೇ ಟೆಸ್ಲಾ ಕಾರುಗಳು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್​ ಕ್ರಿಯೇಟ್​ ಮಾಡಿದೆ.
ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಟೆಸ್ಲಾ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದರೆ ಚಾಲಕನ ಸೀಟಿನಲ್ಲಿ ಯಾರೂ ಇಲ್ಲದೇ ಇದ್ದರೂ ಸಹ ಕಾರು ಸಂಚರಿಸುತ್ತಿದೆ. ಕ್ಯಾಲಿಫೋರ್ನಿಯಾ ಹೆದ್ದಾರಿ ಗಸ್ತು ನಿಗಮ ಈ ವಿಡಿಯೋವನ್ನ ಪೋಸ್ಟ್ ಮಾಡಿದೆ.

ಕಿರುಕುಳ ನೀಡಿ ತಾಯಿ ಹತ್ಯೆ ಮಾಡಿದ ಪಾಪಿ ಪುತ್ರ

ಚಾಲಕ ರಹಿತ ಕಾರುಗಳನ್ನ ಟೆಸ್ಲಾ ಕಂಪನಿ ಅಭಿವೃದ್ಧಿ ಪಡಿಸಿದ್ರೂ ಸಹ ಚಾಲಕನ ಸೀಟಿನಲ್ಲಿ ಒಬ್ಬರು ಕುಳಿತುಕೊಳ್ಳಲೇಬೇಕು. ಸುರಕ್ಷತಾ ದೃಷ್ಟಿಯಿಂದಾಗಿ ಕಾರು ತನ್ನಿಂದ ತಾನೇ ಚಲಿಸುತ್ತಾ ಇದ್ದರೂ ಸಹ ಈ ಸೀಟಿನಲ್ಲಿ ಒಬ್ಬರು ಕುಳಿತುಕೊಳ್ಳೋದು ಅನಿವಾರ್ಯವಾಗಿದೆ.

ಯಾರದಾರೂ ಒಬ್ಬರು ಚಾಲಕರ ಸೀಟಿನಲ್ಲಿ ಕುಳಿತಿದ್ದಾಗ ಮಾತ್ರ ಈ ರೀತಿ ಆಟೋಪೈಲಟ್​ ಸೌಲಭ್ಯ ಬಳಕೆ ಮಾಡಿ ಎಂದು ಟೆಸ್ಲಾ ಕಂಪನಿಯೇ ಹೇಳಿದೆ. ಆಟೋ ಪೈಲಟ್​ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಬೇಕು ಅಂದರೆ ನುರಿತ ಚಾಲಕ ಸೀಟಿನಲ್ಲಿ ಕುಳಿತುಕೊಳ್ಳೋದು ಅನಿವಾರ್ಯ ಎಂದು ಕಂಪನಿ ಹೇಳಿದೆ.

ಆದರೆ ಈ ಕಾರಿನಲ್ಲಿ ಯಾವೊಬ್ಬ ವ್ಯಕ್ತಿಯು ಚಾಲಕನ ಸೀಟಿನಲ್ಲಿ ಕುಳಿತುಕೊಂಡಿಲ್ಲ. ಇದು ಕಾನೂನಿಗೆ ವಿರುದ್ಧವಾಗಿದ್ದು ಕ್ಯಾಲಿಫೋರ್ನಿಯಾ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...