alex Certify ವಾಕರಿಕೆ ತರಿಸುತ್ತೆ ಈತ ಸಮೋಸಾ ಇಟ್ಟುಕೊಂಡ ಜಾಗ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಕರಿಕೆ ತರಿಸುತ್ತೆ ಈತ ಸಮೋಸಾ ಇಟ್ಟುಕೊಂಡ ಜಾಗ..!

ಫಾಸ್ಟ್ ಫುಡ್‌ ತಿನ್ನಬೇಕೆಂಬ ಬಯಕೆಯನ್ನು ಈಡೇರಿಸಿಕೊಳ್ಳುವುದು ಈ ಲಾಕ್‌ಡೌನ್ ಅವಧಿಯಲ್ಲಿ ದೊಡ್ಡ ಸವಾಲಾಗಿಬಿಟ್ಟಿದೆ. ನಮ್ಮ ಕೆಲವೊಂದು ಮೆಚ್ಚಿನ ಜಂಕ್‌ಫುಡ್‌ಗಳು ಲಾಕ್‌ಡೌನ್ ಕಾರಣದಿಂದ ಸಿಗದೇ ಹೋಗುತ್ತಿವೆ.

ಬ್ರಿಟನ್‌ನ ಜೈಲಿನಲ್ಲಿದ್ದ ಖೈದಿಯೊಬ್ಬ ತನ್ನ ಬಾಯಿ ಚಪಲ ತೀರಿಸಿಕೊಳ್ಳಲು ಬಲೇ ಶ್ರಮ ಹಾಕಿದ್ದಾನೆ.

ಇಲ್ಲಿನ ವೆಸ್ಟ್‌ ಮಿಡ್‌ಲ್ಯಾಂಡ್‌ ಪೊಲೀಸ್‌ನ ಕ್ರಿಮಿನಲ್ ಜಸ್ಟೀಸ್‌ ಇಲಾಖೆಯ ಇನ್‌ಸ್ಪೆಕ್ಟರ್‌‌ ಮಂಜ್‌ ಅಹಿರ್‌ ಹೇಳುವ ಹಾಗೆ, ಈ ಖೈದಿ ತನ್ನ ಪೃಷ್ಠಭಾಗದಲ್ಲಿ ಇಟ್ಟುಕೊಳ್ಳುವ ಮೂಲಕ ಸಮೋಸಾ ಒಂದನ್ನು ತನ್ನ ಸೆಲ್‌ ಒಳಗೆ ತಂದುಕೊಳ್ಳಲು ಹೋಗಿ ವಿಫಲನಾಗಿದ್ದಾನೆ.

“ಸಾಕಷ್ಟು ವಿಚಿತ್ರ ಘಟನೆಗಳನ್ನು ನಾವು ದಿನವೂ ನೋಡುತ್ತೇವೆ. ಈ ಘಟನೆಯಲ್ಲಿ ಈತ ತನ್ನ ಪೃಷ್ಠದ ನಡುವೆ ಸಮೋಸಾವೊಂದನ್ನು ಇಟ್ಟುಕೊಂಡು ಸೆಲ್‌ ಒಳಗೆ ಕೊಂಡೊಯ್ಯಲು ನೋಡಿದ್ದಾನೆ. ಆ ವೇಳೆ ಸರ್ಚ್ ಮಾಡಿದಾಗ ನಮ್ಮ ಕೈಗೆ ಸಿಕ್ಕಿಬಿದ್ದಿದ್ದಾನೆ” ಎಂದು ಅಹಿರ್‌ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...