alex Certify ವಿದ್ಯುತ್ – ಇಂಟರ್ನೆಟ್ ಅಲರ್ಜಿಯಿರುವ ವ್ಯಕ್ತಿ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್ – ಇಂಟರ್ನೆಟ್ ಅಲರ್ಜಿಯಿರುವ ವ್ಯಕ್ತಿ ಮಾಡಿದ್ದೇನು ಗೊತ್ತಾ…?

ಯುಕೆಯ 48 ವರ್ಷದ ವ್ಯಕ್ತಿಯೊಬ್ಬ ತನಗೆ ವಿದ್ಯುತ್​ ಹಾಗೂ 5ಜಿ ಇಂಟರ್​ನೆಟ್​ನಿಂದ ಅಲರ್ಜಿ ಇದೆ ಎಂದು ಹೇಳಿಕೊಂಡಿದ್ದು ತನಗಾಗಿ ವಿಶೇಷವಾದ ಮನೆಯೊಂದನ್ನ ಕಟ್ಟಿಕೊಳ್ಳುತ್ತಿದ್ದಾನೆ.

ರಾಥ್​​ವೆಲ್​ನಲ್ಲಿರುವ ತನ್ನ ಮನೆಯಲ್ಲಿ ನಾನು ಕೈದಿಯಾಗಿದ್ದೇನೆ ಎಂದು ಬ್ರುನೋ ಬೆರಿಕ್​​ ಹೇಳಿಕೊಂಡಿದ್ದಾನೆ. ಇನ್ನು ಈತನ ಈ ವಿಚಿತ್ರ ಗುಣಲಕ್ಷಣಗಳಿಂದಾಗಿ ಈತನ ಪತ್ನಿ ಹಾಗೂ ಮೂವರು ಮಕ್ಕಳು ವಿದ್ಯುತ್​ ಬಳಕೆ ಮಾಡೋದನ್ನ ತುಂಬಾನೇ ಕಡಿಮೆ ಮಾಡಿದ್ದಾರಂತೆ.

ಚಳಿಗಾಲ ಶುರುವಾಗಿರೋದ್ರಿಂದ ಮನೆಯಲ್ಲಿ ಹೀಟರ್​ಗಳನ್ನ ಹಾಕೋದು ಅನಿವಾರ್ಯ. ತನ್ನ ಅಲರ್ಜಿ ಸಮಸ್ಯೆಯಿಂದ ಮನೆಯವರಿಗೆ ಕಿರಿಕಿರಿಯಾಗಬಾರದು ಅಂತಾ ತಮ್ಮ ಮನೆಯ ಗಾರ್ಡನ್​ನಲ್ಲೇ ಔಟ್​ ಹೌಸ್​ ನಿರ್ಮಿಸಿಕೊಂಡಿದ್ದಾರೆ.

ತನಗೆ ಯಾವ ಸಮಸ್ಯೆ ಇದೆ ಎಂದು ಹುಡುಕೋಕೆ ಅಂತಾನೇ ವಿಶ್ವ ಪರ್ಯಟನೆ ಮಾಡಿದ್ದ ಬ್ರುನೋ ಸುಮಾರು ಹಣ ವ್ಯಯಿಸಿದ ಬಳಿಕ ತಮಗೆ ಎಲೆಕ್ಟ್ರೋಸೆನ್ಸಿಟಿವಿಟಿ ಇದೆ ಎಂಬುದನ್ನ ಕಂಡುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...