
ರಾಥ್ವೆಲ್ನಲ್ಲಿರುವ ತನ್ನ ಮನೆಯಲ್ಲಿ ನಾನು ಕೈದಿಯಾಗಿದ್ದೇನೆ ಎಂದು ಬ್ರುನೋ ಬೆರಿಕ್ ಹೇಳಿಕೊಂಡಿದ್ದಾನೆ. ಇನ್ನು ಈತನ ಈ ವಿಚಿತ್ರ ಗುಣಲಕ್ಷಣಗಳಿಂದಾಗಿ ಈತನ ಪತ್ನಿ ಹಾಗೂ ಮೂವರು ಮಕ್ಕಳು ವಿದ್ಯುತ್ ಬಳಕೆ ಮಾಡೋದನ್ನ ತುಂಬಾನೇ ಕಡಿಮೆ ಮಾಡಿದ್ದಾರಂತೆ.
ಚಳಿಗಾಲ ಶುರುವಾಗಿರೋದ್ರಿಂದ ಮನೆಯಲ್ಲಿ ಹೀಟರ್ಗಳನ್ನ ಹಾಕೋದು ಅನಿವಾರ್ಯ. ತನ್ನ ಅಲರ್ಜಿ ಸಮಸ್ಯೆಯಿಂದ ಮನೆಯವರಿಗೆ ಕಿರಿಕಿರಿಯಾಗಬಾರದು ಅಂತಾ ತಮ್ಮ ಮನೆಯ ಗಾರ್ಡನ್ನಲ್ಲೇ ಔಟ್ ಹೌಸ್ ನಿರ್ಮಿಸಿಕೊಂಡಿದ್ದಾರೆ.
ತನಗೆ ಯಾವ ಸಮಸ್ಯೆ ಇದೆ ಎಂದು ಹುಡುಕೋಕೆ ಅಂತಾನೇ ವಿಶ್ವ ಪರ್ಯಟನೆ ಮಾಡಿದ್ದ ಬ್ರುನೋ ಸುಮಾರು ಹಣ ವ್ಯಯಿಸಿದ ಬಳಿಕ ತಮಗೆ ಎಲೆಕ್ಟ್ರೋಸೆನ್ಸಿಟಿವಿಟಿ ಇದೆ ಎಂಬುದನ್ನ ಕಂಡುಕೊಂಡಿದ್ದಾರೆ.