alex Certify ಆಹಾರ ಕಸಿಯಲು ಬಂದ ಹಕ್ಕಿ ಹೊಟ್ಟೆಗೆ ಪಂಚ್​ ನೀಡಿದ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಹಾರ ಕಸಿಯಲು ಬಂದ ಹಕ್ಕಿ ಹೊಟ್ಟೆಗೆ ಪಂಚ್​ ನೀಡಿದ ಭೂಪ..!

ಯಾರಾದರೂ ನಿಮ್ಮ ಕೈಯಲ್ಲಿರುವ ಆಹಾರವನ್ನ ಕಸಿದುಕೊಳ್ಳಲು ಬಂದರೆ ಏನು ಮಾಡುತ್ತೀರಾ..? ಒಂದೋ ನಮ್ಮ ಆಹಾರವನ್ನ ಹಿಂದಕ್ಕೆ ಎಳೆದುಕೊಳ್ತೇವೆ. ನಮಗಿಂತ ಆಹಾರದ ಅವಶ್ಯಕತೆ ಅವರಿಗೆ ಇದೆ ಎಂದೆನಿಸಿದ್ರೆ ಅವರಿಗೆ ಕೊಟ್ಟುಬಿಡ್ತೇವೆ. ಪ್ರಾಣಿ – ಪಕ್ಷಿಗಳು ಕೇಳಿದ್ರಂತೂ ಇಲ್ಲ ಅನ್ನೋರ ಸಂಖ್ಯೆ ತುಂಬಾನೇ ಕಡಿಮೆ. ಆದರೆ ಈ ಎಲ್ಲಾ ಮಾತಿಗೆ ವಿರುದ್ಧ ಎಂಬಂತೆ ವ್ಯಕ್ತಿಯೊಬ್ಬ ಪಕ್ಷಿ ಹೊಟ್ಟೆಗೆ ಪಂಚ್​ ಮಾಡಿದ ವಿಡಿಯೋ ವೈರಲ್​ ಆಗಿದೆ.

ಕೈಯಲ್ಲಿ ಸೀಗಡಿಯಿಂದ ಮಾಡಿದ ಆಹಾರವನ್ನ ಹಿಡಿದುಕೊಂಡು ವ್ಯಕ್ತಿ ನಡೆದುಕೊಂಡು ಬರ್ತಿದ್ದ. ಇದೇ ವೇಳೆ ಅಲ್ಲೇ ಇದ್ದ ಬೆಳ್ಳಕ್ಕಿ ಆತನ ಬಳಿಗೆ ಬಂದಿದೆ.

ಇನ್ನೇನು ಆತನ ಕೈನಿಂದ ಆಹಾರವನ್ನ ಕಸಿದುಕೊಳ್ತು ಅನ್ನೋವಷ್ಟರಲ್ಲಿ ಅದರ ಹೊಟ್ಟೆಗೆ ಪಂಚ್​ ನೀಡಿದ್ದಾನೆ. ಹಕ್ಕಿ ಅಲ್ಲಿಂದ ಹಾರಿ ಹೋಗುತ್ತಿದ್ದಂತೆಯೇ ಏನೂ ಆಗೇ ಇಲ್ಲ ಎಂಬಂತೆ ಅಲ್ಲಿಂದ ನಡೆದುಕೊಂಡು ಬಂದಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ಸಂಪಾದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...