alex Certify 10 ವರ್ಷಗಳ ಹಿಂದೆ 2020 ರ ಕುರಿತು ಬಾಲಕ ಬರೆದಿದ್ದ ಭವಿಷ್ಯ ವೈರಲ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ವರ್ಷಗಳ ಹಿಂದೆ 2020 ರ ಕುರಿತು ಬಾಲಕ ಬರೆದಿದ್ದ ಭವಿಷ್ಯ ವೈರಲ್..!

2020ರ ಕೊನೆಯ ಘಟ್ಟದಲ್ಲಿ ನಾವಿದ್ದೇವೆ. ಎಲ್ಲಾ ವರ್ಷಗಳಿಗಿಂತ ಭಿನ್ನವಾಗಿದ್ದ 2020ರನ್ನ ನಾವು ಹೇಗೆ ಕಳೆದೆವು ಅಂತಾ ಅನೇಕರು ಆತ್ಮಾವಲೋಕನ ಮಾಡಿಕೊಳ್ಳೋಕೆ ಪ್ರಾರಂಭಿಸಿದ್ದಾರೆ. ಕೊರೊನಾ ವೈರಸ್​​ನ ಆಗಮನದಿಂದಾಗಿ ಈ ವರ್ಷವು ನಾವೆಲ್ಲ ನಿರೀಕ್ಷಿಸಿದಂತಿಲ್ಲ.‌

ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ 2020ರ ಬಗ್ಗೆ ಸಾಕಷ್ಟು ಟ್ರೋಲ್​ಗಳು ಹರಿದಾಡುತ್ತಲೇ ಇವೆ. ಈ ನಡುವೆ 2020ರ ಬಗ್ಗೆ 10 ವರ್ಷಗಳ ಹಿಂದೆ ಬಾಲಕನೊಬ್ಬ ಬರೆದಿದ್ದ ಭವಿಷ್ಯ ಭಾರೀ ವೈರಲ್​ ಆಗಿದೆ.

ಶಾಲೆಯ ವಾರ್ಷಿಕೋತ್ಸವದ ಪುಸ್ತಕವೊಂದರಲ್ಲಿ ಕೆವಿನ್​ ಸಿಂಗ್​ ಎಂಬಾತ 2020ರಲ್ಲಿ ಎಲ್ಲರೂ ಶಾಂತಿಯುತವಾಗಿ ಬದುಕುತ್ತಾರೆ. ಈ ವರ್ಷದಲ್ಲಿ ಪ್ರಪಂಚದ ಎಲ್ಲಾ ರೋಗಗಳು ಗುಣವಾಗಲಿದೆ ಎಂದು ಭವಿಷ್ಯ ನುಡಿದಿದ್ದ.

ಈ ಫೋಟೋ ಇದೀಗ ಟ್ವಿಟರ್​ನಲ್ಲಿ ಸಖತ್​ ವೈರಲ್​ ಆಗಿದೆ. ಅನೇಕರು ನಾವು ಮನೆಯಲ್ಲೇ ಶಾಂತಿಯುತವಾಗಿ ಬದುಕುತ್ತಿದ್ದೇವೆ ನಿಜ. ಆದರೆ ಕೊರೊನಾ ವೈರಸ್​ಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಅಭಿಪ್ರಾಯ ಹೊರಹಾಕ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...