alex Certify ಸಮುದ್ರದಲ್ಲಿ‌ ಕರಗಿತಾ ಬಿಕಿನಿ‌…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರದಲ್ಲಿ‌ ಕರಗಿತಾ ಬಿಕಿನಿ‌…?

ಬಗೆಬಗೆಯ ಪ್ರಾಂಕ್ ಗಳು ಆಗಿಂದಾಗೆ ನೆಟ್ಟಿಗರನ್ನು‌‌ ರಂಜಿಸುತ್ತಿರುತ್ತವೆ. ಈಗ ಬಿಕಿನಿ‌ ಕುರಿತ ಕುಚೇಷ್ಟೆಯ ಪ್ರಾಂಕ್ ವಿಡಿಯೋ ಸದ್ದು ಮಾಡುತ್ತಿದೆ.

ಜೂಲಿಯಸ್ ಡೀನ್ ಮತ್ತು ಅವನ ಗೆಳತಿ ಎಸ್ಟೆಲ್ಲೆ ರಜಾದಿನ ಕಳೆಯಲು ಬೀಚ್ ಗೆ ತೆರಳಿದ್ದರು. ಅಲ್ಲಿ ಜೂಲಿಯಸ್ ಗೆಳತಿ ಸಮುದ್ರಕ್ಕೆ ಹೋಗುವುದನ್ನು ಚಿತ್ರೀಕರಿಸಿದ್ದು, ಅದಕ್ಕೆ ಹಿನ್ನೆಲೆಯಲ್ಲಿ ಕಾಮೆಂಟರಿಯನ್ನೂ‌ ನೀಡಿದ್ದಾನೆ.

“ನನ್ನ ಗೆಳತಿ ನೀರಿಗೆ ಇಳಿದ ಮೇಲೆ ಬಿಕಿನಿ ಕಳೆದುಕೊಳ್ಳಲಿದ್ದಾಳೆ, ಇದು ತುಂಬಾ ಕೆಟ್ಟದು” ಎಂದು ಜೂಲಿಯಸ್ ವಿವರಿಸುವಾಗ ಎಸ್ಟೆಲ್ಲೆ ಅಲೆಗಳೊಂದಿಗೆ ಆಟವಾಡುವುದನ್ನು ಕಾಣಬಹುದು.

ಎಸ್ಟೆಲ್ಲೆ ನೀರಿನಲ್ಲಿ ಮುಳುಗಿದ ತಕ್ಷಣ, ಜೂಲಿಯಸ್, “ಈಗ ಸೂಚನಾ ಕೈಪಿಡಿಯ ಪ್ರಕಾರ, ಬಿಕಿನಿ ಕರಗುವಂತೆ ಮಾಡಲು ರಾಸಾಯನಿಕಗಳು ಕೆಲಸ ಮಾಡಲು 15-30 ಸೆಕೆಂಡುಗಳು ತೆಗೆದುಕೊಳ್ಳಬೇಕು……ಇದು ತುಂಬಾ ಕೆಟ್ಟದು ಆದರೆ ತುಂಬಾ ಒಳ್ಳೆಯದು” ಎಂದು ಹೇಳುತ್ತಾನೆ

ಇದ್ದಕ್ಕಿದ್ದಂತೆ, ಎಸ್ಟೆಲ್ಲೆ ತನ್ನ ಈಜುಡುಗೆ ನೀರಿನಲ್ಲಿ ಕಳೆದಿದೆ ಎಂದು ಭಾವಿಸಿ ಸಹಾಯಕ್ಕಾಗಿ ಗೆಳೆಯನನ್ನು ಟವಲ್ ತರುವಂತೆ ಕೂಗುತ್ತಾಳೆ. ಜೂಲಿಯಸ್ ಟವೆಲ್‌ ಕೊಟ್ಟ ನಂತರ ಅವಳು ನೀರಿನಿಂದ ಹೊರಬಂದು ಅದನ್ನು ಸುತ್ತಿಕೊಳ್ಳುತ್ತಾಳೆ.

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊಗೆ 1 ಲಕ್ಷಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಮತ್ತು 16,000 ಕ್ಕೂ ಹೆಚ್ಚು ಕಾಮೆಂಟ್‌ಗಳಿವೆ. ಕೆಲವರು ತಮಾಷೆಯನ್ನು ಸಾಮಾನ್ಯ ಎಂದಿದ್ದರೆ ಮತ್ತೆ ಕೆಲವರು ವಿಡಿಯೊವನ್ನು ಎರಡು ಪ್ರತ್ಯೇಕವಾಗಿ ಚಿತ್ರೀಕರಿಸಲಾಗಿದೆ ಮತ್ತು ಒಟ್ಟಿಗೆ ಎಡಿಟ್ ಎಂದು ಹೇಳಿದ್ದಾರೆ. ಬಿಕಿನಿ ಕಾರಣಕ್ಕೆ ವೀಕ್ಷಣೆ ಹೆಚ್ಚಾಗಿದ್ದು ಹೊರತುಪಡಿಸಿ, ಬಿಕಿನಿ ‌ಕರಗಿತಾ, ನೀರಿನಲ್ಲಿ ತೇಲಿ ಹೋಯಿತಾ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...