alex Certify ಒಂದು ಹಾವನ್ನು ಎಳೆಯುತ್ತಲೇ ಕಾಣಿಸಿಕೊಂಡಿತು ಮತ್ತೊಂದು ಹಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಹಾವನ್ನು ಎಳೆಯುತ್ತಲೇ ಕಾಣಿಸಿಕೊಂಡಿತು ಮತ್ತೊಂದು ಹಾವು

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಾವುಗಳ ಬಗ್ಗೆ ಸಾವಿರಾರು ವಿಡಿಯೋಗಳು ಅಪ್‌ಲೋಡ್‌ ಆಗುತ್ತವೆ. ಇವುಗಳಲ್ಲಿ ಕೆಲವೊಂದು ಭಾರೀ ಸುದ್ದಿ ಮಾಡುತ್ತವೆ.

ಬ್ರಿಟನ್‌ನ ಮ್ಯಾಂಚೆಸ್ಟರ್‌ನ ಸ್ಟಿಂಟನ್‌ನಲ್ಲಿ ಹೆಬ್ಬಾವನ್ನೇ ಮಾಸ್ಕ್‌ನಂತೆ ಬಳಸುತ್ತಿರುವ ವ್ಯಕ್ತಿಯೊಬ್ಬನನ್ನು ಕಂಡಿದ್ದೆವು. ಇದೇ ವೇಳೆ, ಮುಂಬಯಿಯಲ್ಲಿ ಹೆಬ್ಬಾವೊಂದು ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದನ್ನೂ ತಿಳಿದುಕೊಂಡೆವು.

ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಜಲಾಗರದ ಪಕ್ಕ ಇರುವ ಸ್ಲೈಡ್‌ ಒಂದರ ಮೇಲೆ ನಿಂತಿರುವ ವ್ಯಕ್ತಿಯೊಬ್ಬರು ನೀರಿನ ಮೇಲೆ ಹಾವೊಂದನ್ನು ಕಂಡು ಅದನ್ನು ಅಲ್ಲಿಂದ ಎಳೆಯಲು ಯತ್ನಿಸುತ್ತಲೇ, ಸ್ಲೈಡ್‌ ಮೇಲಿಂದ ಅದಕ್ಕಿಂತ ದೊಡ್ಡ ಹಾವೊಂದು ಕಾಣಿಸಿಕೊಂಡಿದೆ. ಒಮ್ಮೆಲೆ ಎರಡು ಹಾವನ್ನು ಕಾಣುತ್ತಲೇ ಗಾಬರಿಗೊಂಡ ಆತ ತನ್ನ ಸಮತೋಲನ ಕಳೆದುಕೊಂಡು ನೀರಿಗೆ ಬೀಳುತ್ತಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...