alex Certify ಐಸ್ ಕ್ರೀಂ ತಿಂದ ಬೆಕ್ಕಿನ ವಿಡಿಯೋ ವೈರಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸ್ ಕ್ರೀಂ ತಿಂದ ಬೆಕ್ಕಿನ ವಿಡಿಯೋ ವೈರಲ್…!

ಬೆಕ್ಕೇ ಬೆಕ್ಕೆ ಮುದ್ದಿನ ಸೊಕ್ಕೆ ಎನ್ನುವ ಪದ್ಯವೀಗ ಅನ್ವರ್ಥ. ಸೊಕ್ಕು ತೋರುವ ಮುದ್ದಿನ ಬೆಕ್ಕಿಗಾಗಿ ಸಾಮಾಜಿಕ ಜಾಲತಾಣದಲ್ಲಿ ವಾಗ್ಯುದ್ಧವೇ ಶುರುವಾಗಿ ಬಿಟ್ಟಿದೆ.

ಮನೆಯಲ್ಲಿನ ತನ್ನ ಬೆಕ್ಕಿಗೆ ಮೊದಲ ಬಾರಿಗೆ ಐಸ್ ಕ್ರೀಂ ತಿನ್ನಿಸಿದ ಅದರ ಮಾಲೀಕ, ತಿನ್ನುವಾಗಿನ ಬೆಕ್ಕಿನ ಮುಖಭಾವವನ್ನ ವಿಡಿಯೋ ಮಾಡಿದ್ದಾನೆ.

ಕೋರೈಸುವ ತಣ್ಣಗಿನ ಐಸ್ ನ್ನು ಚಪ್ಪರಿಸಿ ತಿನ್ನುತ್ತಿದ್ದ ಬೆಕ್ಕು, ಆಗಾಗ್ಗೆ ಕಣ್ಮುಚ್ಚಿಕೊಳ್ಳುವುದು, ಮುಖ ಕೊಡುವುದು, ಮೈನಡುಗಿಸುವುದು ಹೀಗೆ ಚಿತ್ರ-ವಿಚಿತ್ರ ಪ್ರತಿಕ್ರಿಯೆ ತೋರುತ್ತಿತ್ತು. ಇದನ್ನು ಎಂಜಾಯ್ ಮಾಡುತ್ತಾ ಮಾಲೀಕನೂ ಒಂದೊಂದೇ ಸ್ಪೂನ್ ಐಸ್ ತಿನ್ನಿಸುತ್ತಾ, ಬೆಕ್ಕಿನ ಆಂಗಿಕ ಅಭಿನಯ ವಿಡಿಯೋ ಮಾಡಿ ಜಾಲತಾಣದಲ್ಲಿ ಹಾಕಿದ್ದಾನೆ.

ಒಂದಷ್ಟು ಜನ ಇಷ್ಟಪಟ್ಟರೆ, ಇನ್ನೊಂದಷ್ಟು ಜನ ಬೆಕ್ಕಿನ ಮಾಲೀಕನ ವಿರುದ್ಧವೇ ಹರಿಹಾಯ್ದಿದ್ದಾರೆ. ಬೆಕ್ಕನ್ನ ಅಮಾನವೀಯವಾಗಿ ನಡೆಸಿಕೊಂಡಿದ್ದು ತಪ್ಪು ಎಂದೆಲ್ಲ ಕೆಂಗಣ್ಣು ಬೀರಿದ್ದಾರೆ. ಇದಕ್ಕೆ ಸಮರ್ಥನೆ ಕೊಡಲು ಹೋದವರ ಮಧ್ಯೆ ಜಾಲತಾಣದಲ್ಲೇ ವಾಗ್ಯುದ್ಧ ನಡೆದಿದೆ.

ವಿಶೇಷವೆಂದರೆ ಜೂ.8 ರಂದು ಹಾಕಿದ ಈ ಪೋಸ್ಟ್ ನ್ನು 14 ಸಾವಿರ ಮಂದಿ ನೋಡಿದ್ದು, ಪ್ರವಾಹೋಪಾದಿಯಲ್ಲಿ ಕಮೆಂಟ್ ಗಳು ಭೋರ್ಗರೆದು ಅಬ್ಬರಿಸುತ್ತಿರುವುದಂತೂ ಸುಳ್ಳಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...