alex Certify ಕಿಡ್ನಾಪ್ ಆದ 32 ವರ್ಷದ ಬಳಿಕ ಒಂದಾದ ತಾಯಿ – ಮಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಡ್ನಾಪ್ ಆದ 32 ವರ್ಷದ ಬಳಿಕ ಒಂದಾದ ತಾಯಿ – ಮಗ

ತನ್ನ ಎರಡನೇ ವಯಸ್ಸಿನಲ್ಲಿ ಅಪಹರಣಕ್ಕೊಳಗಾದ ಚೀನಾದ ವ್ಯಕ್ತಿಯೊಬ್ಬ 32 ವರ್ಷದ ನಂತರ ಮತ್ತೆ ತನ್ನ ಕುಟುಂಬದೊಂದಿಗೆ ಸೇರಿಕೊಂಡಿದ್ದಾನೆ.

ಕ್ಸಿಯಾನ್ ನಗರದಲ್ಲಿ ಕುಟುಂಬವು ಆತನನ್ನು ಮತ್ತೆ ಅಪ್ಪಿಕೊಂಡ ಕ್ಷಣ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ .

ಮಾವೊಯಿನ್ ಎಂಬಾತ 1988ರಲ್ಲಿ ತನ್ನ ತಂದೆಯೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಿಡ್ನಾಪ್ ಆಗಿದ್ದ. ಬಳಿಕ ಮಾರಾಟವಾಗಿದ್ದ. ಕುಟುಂಬವೊಂದು ಆತನನ್ನು ದತ್ತು ತೆಗೆದುಕೊಂಡಿತ್ತು.

ಇತ್ತ ಆತನ ತಾಯಿ ತನ್ನ ಕೆಲಸವನ್ನು ಬಿಟ್ಟು ಮಗನನ್ನು ಹುಡುಕಲು ಪ್ರಾರಂಭಿಸಿದಳು. ಮೂರು ದಶಕ ನಿರಂತರವಾಗಿ ಹುಡುಕುವ ಪ್ರಯತ್ನ ಕೊನೆಗೂ ಫಲಕೊಟ್ಟಿತು. ಏಪ್ರಿಲ್ ಅಂತ್ಯದಲ್ಲಿ ಒಂದು ಸುಳಿವು ಸಕಾರಾತ್ಮಕ ಫಲಿತಾಂಶ ನೀಡಿತು.

600 ಕಿಲೋಮೀಟರ್ ದೂರದಲ್ಲಿರುವ ಕುಟುಂಬಕ್ಕೆ ಮಾರಾಟ ಮಾಡಲಾಗಿದೆ ಎಂಬ ಸುಳಿವು ಸಿಕ್ಕಿದ ನಂತರ, ಪೊಲೀಸರು ಹುಡುಕಾಟಕ್ಕೆ ತಂತ್ರಜ್ಞಾನ ಬಳಸಿದರು.

ಫೋಟೋವನ್ನು ಡೆವಲಪ್ ಮಾಡಿ, ನಂತರ ಡಿಎನ್ಎ ಪರೀಕ್ಷೆ ಬಳಿಕ ಗುರುತು ಖಾತ್ರಿ ಮಾಡಿಕೊಂಡ ಪೊಲೀಸರು, ತಾಯಿಗೆ ಸುದ್ದಿಮುಟ್ಟಿಸಿದರು. ನಂತರ ಪುನರ್ಮಿಲನ‌ ಕಾರ್ಯಕ್ರಮ ಜನ‌ಸಮೂಹದ ನಡುವೆ ನೆರವೇರಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...