alex Certify ಗುಂಡಿ ಬಿದ್ದ ರಸ್ತೆಯಲ್ಲಿ ಸ್ನಾನ ಮಾಡಿ, ಮೀನು ಹಿಡಿದು ಪ್ರತಿಭಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಂಡಿ ಬಿದ್ದ ರಸ್ತೆಯಲ್ಲಿ ಸ್ನಾನ ಮಾಡಿ, ಮೀನು ಹಿಡಿದು ಪ್ರತಿಭಟನೆ

ತಾನು ಓಡಾಡುವ ರಸ್ತೆಗಳಲ್ಲಿ ತುಂಬಿರುವ ಹಳ್ಳ-ಕೊಳ್ಳಗಳನ್ನು ಸರಿಪಡಿಸಲು ಎಷ್ಟೇ ಮನವಿ ಸಲ್ಲಿಸಿದರೂ ಸ್ಪಂದಿಸದ ಪಾಲಿಕೆಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿದ ವ್ಯಕ್ತಿಯೊಬ್ಬರು ಹೀಗೊಂದು ಐಡಿಯಾ ಮಾಡಿದ್ದಾರೆ.

ರಸ್ತೆಯಲ್ಲಿರುವ ದೊಡ್ಡ ಗುಂಡಿಯೊಂದರಲ್ಲಿ ಸ್ನಾನ ಮಾಡಿ ಮೀನು ಹಿಡಿಯುತ್ತಿರುವ ತನ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಇಂಡೋನೇಷ್ಯಾದ ಅಮಾಕ್ ಒಹಾನ್ ಎಂಬ ಈ ವ್ಯಕ್ತಿ ಸಖತ್ ವೈರಲ್ ಆಗಿದ್ದಾನೆ.

ರಸ್ತೆ ಮೇಲೆ ಕುಳಿತ ಈತ, ಛತ್ರಿ ಹಿಡಿದುಕೊಂಡು ಮೀನು ಹಿಡಿಯುವವನ ಹಾಗೆ ನಟಿಸಿ, ಗುಂಡಿ ಬಿದ್ದ ರಸ್ತೆಯ ಸ್ಥಿತಿಗತಿಯ ವಿರುದ್ಧ ದನಿಯೇರಿಸಿದ್ದಾರೆ.

ಎರಡು ವರ್ಷಗಳಿಂದಲೂ ರಸ್ಥೆ ಕೆಟ್ಟಿದ್ದರೂ ಸಹ ಸಂಬಂಧಿತ ಸಂಸ್ಥೆಗಳು ಈ ಕಡೆ ತಲೆಯೇ ಹಾಕಿರಲಿಲ್ಲ ಎಂದು ಆಪಾದಿಸಿದ ಅಮಾಕ್‌ನ ಈ ವಿಶಿಷ್ಟ ಪ್ರತಿಭಟನೆಗೆ ಸ್ಪಂದಿಸಿದ ಲಾಂಬಾಕ್‌ ನಗರ ಇರುವ ಪ್ರಾಂತೀಯ ಸರ್ಕಾರದ ಲೋಕೋಪಯೋಗಿ ಇಲಾಖೆ, ’ಕೂಡಲೇ ಸರಿಪಡಿಸುವುದಾಗಿ’ ಭರವಸೆ ಕೊಟ್ಟಿದೆ.

VIRAL!!! Amaq Ohan Mancing dan Mandi DisiniBREAKING NEWS: Seniman sekaligus Aktivis Sosial Amaq Ohan, mandi dan mancing di genangan air akibat jalan serta drainase yang rusak di perempatan IPDN Praya Lombok Tengah.Amaq Ohan mandi dan mancing disana sebagai bentuk protes karena jalan yang rusak cukup parah itu, tak kunjung diperbaiki.

Posted by Prayapost.net on Monday, March 15, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...